Tuesday, May 20, 2025
Google search engine

Homeರಾಜಕೀಯಮೊಟ್ಟೆ ವಿತರಣೆ ಕಾರ್ಯಕ್ರಮ:ಇಂದಿನಿಂದ ಅಧಿಕೃತ ಚಾಲನೆ

ಮೊಟ್ಟೆ ವಿತರಣೆ ಕಾರ್ಯಕ್ರಮ:ಇಂದಿನಿಂದ ಅಧಿಕೃತ ಚಾಲನೆ

ಮಂಡ್ಯ: ಕಾಂಗ್ರೆಸ್ ಸರ್ಕಾರದ ಮತ್ತೊಂದು ಯೋಜನೆಗೆ ಇಂದಿನಿಂದ ಚಾಲನೆ ದೊರಕಿದ್ದು, ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿರುವ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ನಗರದ ಹೊಸಹಳ್ಳಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೆರಡು ದಿನ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ 8 ನೇ‌ ತರಗತಿ ವರೆಗೆ ವಾರಕ್ಕೆ ಒಂದು ಮೊಟ್ಟೆ ಕೊಡ್ತಿದ್ದರು.ಇಂದಿನಿಂದ 1-10 ತರಗತಿವರೆಗಿನ ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೆರಡುದಿನ ಮೊಟ್ಟೆ ವಿತರಣೆ ಮಾಡಲಾಗುತ್ತದೆ, ಮೊಟ್ಟೆ ತಿನ್ನದ ಮಕ್ಕಳಿಗೆ ಶೇಂಗಾ ಚಿಕ್ಕಿ (ಕಡಲೆ ಮಿಠಾಯಿ) ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಮಧ್ಯೆಯು ಮೊಟ್ಟೆ ವಿತರಿಸುತ್ತಿದ್ದೇವೆ.ವಿರೋಧ ಪಕ್ಷದವರು ಎಲ್ಲಿಂದ ದುಡ್ಡು ತರ್ತೀರಾ ಎಂದು ಹೇಳ್ತಿದ್ದಾರೆ.
ಅದರ‌ ನಡುವೆಯು ಸಿಎಂ ಮಕ್ಕಳ ಪೌಷ್ಟಿಕಾಂಶದ ದೃಷ್ಟಿಯಿಂದ ಎರಡು ಮೊಟ್ಟೆ ಕೊಡಲು ತೀರ್ಮಾನ ಕೈಗೊಂಡಿದ್ದಾರೆ ಎಂದರು.

ನಂತರ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಮುಂದುವರೆದು ಮಾತನಾಡಿ ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ತೊಂದರೆ ಇದೆ.ಅದನ್ನ ಒಂದೂವರೆ ವರ್ಷದಲ್ಲಿ ಸರಿಪಡಿಸುತ್ತೇವೆ ಎಂದು ಹೇಳಿದರು.

ಎನ್ಇಪಿ ಗೆ ರಾಜ್ಯ ಸರ್ಕಾರ ವಿರೋಧ ವಿಚಾರ:

ಹಿಂದಿ ಏರಿಕೆ ಯಾಕೆ ಏರುತ್ತಿದ್ದಾರೆ.ಹಿಂದಿ ಏರಿಕೆಯಿಂದ ಕನ್ನಡವನ್ನೆ ಮರೆತುಬಿಟ್ಟೋಗ್ತೀವಿ. ನಾವು ಫೆಡೆರೇಷನ್ ಸಿಸ್ಟಮ್ ನಲ್ಲಿದ್ದೇವೆ.ಎಲ್ಲ ರಾಜ್ಯದಲ್ಲಿಯು ಬೇರೆ ಬೇರೆ ಸಂಸ್ಕೃತಿ, ಭಾಷೆ, ಶಿಕ್ಷಣ ಇರುತ್ತೆ.ಅದನ್ನ‌ ತಂದು ಬೇರೆ ರಾಜ್ಯಗಳ ಮೇಲೆ ಹೇರುವ ಕೆಟ್ಟ ಸಂಸ್ಕೃತಿ ಕೇಂದ್ರ ಸರ್ಕಾರಕ್ಕೆ ಇದೆ. ನಾವು ಪ್ರಣಾಳಿಕೆಯಲ್ಲಿ ಎನ್ಇಪಿ ವಿರೋಧಿಸುತ್ತೇವೆ, ಪಠ್ಯ ಪರಿಷ್ಕರಣೆ ಮಾಡ್ತೇವೆ ಎಂದು ಇತ್ತು. ಅದಕ್ಕೆ ನಾವು ಇಂದು ಅಧಿಕಾರದಲ್ಲಿ ಕುಳಿತಿದ್ದೇವೆ. ಎನ್ಇಪಿ, ಬಿಜೆಪಿ ಸರ್ಕಾರದ ಅವಧಿ ಪಠ್ಯ ವಿರೋಧಿಸಿದ್ದಕ್ಕೆ ನಾವು ಅಧಿಕಾರದಲ್ಲಿರೋದು.ಮಕ್ಕಳ ಶಿಕ್ಷಣ ಪಕ್ಷದ ಸಿದ್ದಾಂತದ ಮೇಲೆ ನಡೆಯಬಾರದು.ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಳ್ಳೆಯದಾಗುವ ತೀರ್ಮಾನ ತೆಗೆದುಕೊಳ್ಳಬೇಕು.ರಾಜಕೀಯ ದುರುದ್ದೇಶದಿಂದ ಶಿಕ್ಷಣ ವ್ಯವಸ್ಥೆ ಇರಬಾರದು.ನಮ್ಮ ಸರ್ಕಾರ ಶಿಕ್ಷಣದಲ್ಲಿ ಉತ್ತಮ ವಾತಾವರಣ ರೂಪಿಸುತ್ತೆ. ಅದಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರಿ ಶಾಲೆಗಳನ್ನ ಖಾಸಗಿಯವರಿಗೆ ಗುತ್ತಿಗೆ ವಿಚಾರ:

ನಂತರ ರಾಜ್ಯ ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಕೊಡುವ ವಿಚಾರವಾಗಿ ಮಾತನಾಡಿ
ಸರ್ಕಾರಿ ಶಾಲೆಯನ್ನ ಯಾರಿಗು ಗುತ್ತಿಗೆ ಕೋಡೋಕೆ‌ ಆಗಲ್ಲ.ಆದ್ರೆ ಮೇಲ್ದರ್ಜೆಗೆ ತೆಗೆದುಕೊಂಡು ಹೋಗಬಹುದು ಅಷ್ಟೇ.ಖಾಸಗಿ ಶಾಲೆಗೆ ಗುತ್ತಿಗೆ ಕೊಡೋ ಪ್ರಸ್ಥಾವನೆನೆ ಇಲ್ಲ.ಖಾಸಗಿ ಶಾಲೆಯ ಸಹಭಾಗಿತ್ವದಲ್ಲಿ ಒಂದಷ್ಟು ಸರ್ಕಾರಿ ಶಾಲೆ ಅಭಿವೃದ್ದಿ ಪಡಿಸಬಹುದು ಎಂದು ಗುತ್ತಿಗೆ ಗುತ್ತಿಗೆ ವಿಚಾರವನ್ನು ತಳ್ಳಿ ಹಾಕಿದರು.

ಶಿಕ್ಷಕರ ನೇಮಕಾತಿ ವಿಳಂಬ ವಿಚಾರ:

ಶಿಕ್ಷಕರ ನೇಮಕಾತಿ ವಿಳಂಬ ವಿಚಾರವಾಗಿ ಪ್ರತಿಕ್ರಿಹಿಸಿ ಸದ್ಯ ವಿಚಾರ ಕೋರ್ಟ್ ನಲ್ಲಿದೆ.21 ಅಥವಾ 27 ರ ವರೆಗೆ ವರದಿ ಸಲ್ಲಿಸುವಂತೆ‌ ಕೇಳಿದೆ. 28 ರಂದು ಪ್ರಕರಣ ಸಂಬಂಧ‌ ವಿಚಾರಣೆ ಇದೆ.ತೀರ್ಪು ಬರುವವರೆಗು ನೇಮಕಾತಿ ಪತ್ರ ನೀಡದಂತೆ ಸೂಚಿಸಿದೆ.ತ್ವರಿತಗತಿಯಲ್ಲಿ 13500 ಶಿಕ್ಷಕರ ನೇಮಕಾತಿ ಆಗಲಿದೆ ಎಂದರು.

ಕಾವೇರಿ ವಿಚಾರದಲ್ಲಿ ಧ್ವನಿ ಎತ್ತದ ಬಿಜೆಪಿ ಸಂಸದರು:
ಕಾವೇರಿ ವಿಚಾರದಲ್ಲಿ ಧ್ವನಿ ಎತ್ತದ ಬಿಜೆಪಿ ಸಂಸದರ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿ ,25 ಜನ ಸಂಸದರು ಗೆದ್ದು ಕೇಂದ್ರಕ್ಕೆ ಹೋಗಿದ್ದಾರಲ್ಲ, ಅವನು ಏನು ಮಾಡ್ತಿದ್ದಾರೆ.ಜನಪ್ರತಿನಿಧಿಗಳು ಪಕ್ಷಕ್ಕೆ ಸೇರಿದವರಲ್ಲ, ಸರ್ಕಾರಕ್ಕೆ ಸೇರಿದವರು. ಅವರು ಕೂಡ ಧ್ವನಿ ಸೇರಿಸಬೇಕಲ್ವ. 26 ಜನ ಹೋಗಿ ಕೂತಿದ್ದಾರಲ್ಲ, ರಾಜ್ಯದ ಪರ ಒಂದು ದಿನ ಧ್ವನಿ ಎತ್ತಿದ್ದಾರಾ.?.ನಾನು‌ ಅವರಿಗು ಮನವಿ ಮಾಡ್ತೇನೆ, ಫಸ್ಟ್ ಧ್ವನಿ ಎತ್ತಿ.ಕೇಂದ್ರ ಸರ್ಕಾರದ ಬಳಿ ಕೀ ಇದ್ದಾಗ ಕಷ್ಟವಾಗುತ್ತೆ.ಕಾನೂನು ಹೇಗೆ ಆಡಳಿತ ಮಾಡುತ್ತೆ.ಕೇಂದ್ರ ಸರ್ಕಾರ ಯಾವ ರೀತಿ ಒತ್ತಡ ತರುತ್ತಾರೆ ಎಂಬ ವಿಚಾರ ಗೊತ್ತಿದೆ.ನೀರು ಇಲ್ಲ ಎಂದಾಗ ದೊಡ್ಡ ಸಮಸ್ಯೆಯಾಗುತ್ತೆ.ಸಮಸ್ಯೆ ಬರೋದೆ ನೀರು ಇಲ್ಲದಾಗ. ಇಲ್ಲಿನ ರೈತರೇ ಸಂಸದರನ್ನ ಗೆಲ್ಲಿಸಿಕಳುಹಿಸಿರೋದು.ಸಂಸತ್ತಿನಲ್ಲಿ ಹಾಗೂ ಪ್ರಧಾನಿ ಮುಂದೆ ಸಂಸದರು ಧ್ವನಿ ಎತ್ತಬೇಕು.ಕೇಂದ್ರ ಸರ್ಕಾರದ ವಿರುದ್ದ ಧ್ವನಿ ಎತ್ತುವಂತೆ ಬಿಜೆಪಿ ಸಂಸದರಿಗೆ ಶಿಕ್ಷಣ ಸಚಿವ ಟಾಂಗ್ ನೀಡಿದರು.

RELATED ARTICLES
- Advertisment -
Google search engine

Most Popular