ಚಾಮರಾಜನಗರ : ತಾಲೂಕಿನ ವೆಂಕಟಯ್ಯನಛತ್ರ ಹೊಸೂರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ವೃದ್ಧನನ್ನು ಗಾಯಗೊಳಿಸಿರುವ ಘಟನೆ ಗುರುವಾರ ಮಧ್ಯಾಹ್ನದ ವೇಳೆ ನಡೆದಿದೆ.
ಗ್ರಾಮದ ಶಿವಮಲ್ಲಪ್ಪ ಗಾಯಗೊಂಡಿರುವ ವೃದ್ಧ. ಇವರು ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿರುವಾಗ ದಾಳಿ ನಡೆಸಿರುವ ಚಿರತೆಯು ಬೆನ್ನು ಸೇರಿದಂತೆ ಇನ್ನಿತರ ಭಾಗಗಳಿಗೆ ಗಾಯಗೊಳಿಸಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ.
ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಘಟನಾಸ್ಥಳಕ್ಕೆ ಆಗಮಿಸಿ ಬಿಆರ್ ಟಿ ಪ್ರಾದೇಶಿಕ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಗಾಯಾಳುವನ್ನು ನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಈ ವೇಳೆ ACF ಮಂಜುನಾಥ್, RFO (ಪ್ರಭಾರ) ಚಂದ್ರಕುಮಾರ್ ಸೇರಿದಂತೆ ಇತರರಿದ್ದರು.



