Wednesday, May 21, 2025
Google search engine

Homeರಾಜ್ಯಸುದ್ದಿಜಾಲಕೆ ಎಡತೊರೆ  ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಕೆ ಎಡತೊರೆ  ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ವರದಿ ಎಡತೊರೆ  ಮಹೇಶ್

ಎಚ್ ಡಿ ಕೋಟೆ:  ಕೆ ಎಡತೊರೆ  ಹಾಲು ಉತ್ಪಾದಕರ ಸಹಕಾರ ಐದು ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್.ಟಿ ಚಂದ್ರಶೇಖರ್ ಉಪಾಧ್ಯಕ್ಷರಾಗಿ ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾದರೂ

ಕೆಲ ದಿನಗಳ ಹಿಂದೆ   ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನಡೆದಿದ್ದು ಇಂದು ಅಧ್ಯಕ್ಷರಿಗೆ ಚಂದ್ರಶೇಖರ್ ಮತ್ತು ಉಪಾಧ್ಯಕ್ಷರಿಗೆ  ನರಸಿಂಹಮೂರ್ತಿ ನಾಮಪತ್ರ ಸಲ್ಲಿಸಿದರು.

ಈ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರು ನಮ್ಮ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸುಮಲತಾ ರವರು ಅಧ್ಯಕ್ಷರಾಗಿ ಚಂದ್ರಶೇಖರ್ ಉಪಾಧ್ಯಕ್ಷರಾಗಿ ನರಸಿಂಹಮೂರ್ತಿ ಆಯ್ಕೆಯಾಗಿರುತ್ತಾರೆ ಎಂದು  ಘೋಷಿಸಿದರು.

ನಂತರ ಗ್ರಾಮಸ್ಥರು ಮತ್ತು  ನಿರ್ದೇಶಕರುಗಳು ಸೇರಿ  ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಶಂಭುಲಿಂಗಮ್ಮ,   ದ್ರಾಕ್ಷಾಯಿಣಿ  ಚಿಕ್ಕಣ್ಣಗೌಡ,  ಮಲ್ಲೇಗೌಡ ವೆಂಕಟೇಶ್,   ಗಣೇಶ ಕೆಂಗೇಗೌಡ , ರಮೇಶ ಕುಮಾರಸ್ವಾಮಿ, ಜಯ ಸ್ವಾಮಿಗೌಡ,   ಸೋಮೇಶ್ ಮಾಜಿ ಪ್ರಧಾನರು  ಸುಭಾಷ್ ಚಂದ್ರ, ವೈಎನ್  ಕುಮಾರ್ ಗ್ರಾಮದ ಯಜಮಾನ್ರುಗಳಾದ  ನಂದೀಶ್   ಸುಭಾಷ್ ಚಂದ್ರ, ಕೆಬಿ  ಶಿವಕುಮಾರ್  ಮುನೀರ್ ಸಾಬ್ , ಗಂಗಾಧರ್ ಮಂಜು ಶೆಟ್ಟಿ,  ಸತೀಶ್,  ಮಹೇಶ್,  ವೈ ಡಿ ಹನುಮಂತ,  ಬಿ ಆರ್ ಬಸವರಾಜ್ ಗ್ರಾಮ ಪಂಚಾಯಿತಿ ಸದಸ್ಯ ಎಸ್ ಮಹೇಶ್ ಬಿಟಿ ಉಮೇಶ್ ರಿಜ್ವಾನ್ ಖಾನ್ ಬಿ ಟಿ ರವಿ ಮಾಜಿ ಯಜಮಾನ ಚಂದ್ರೇಗೌಡ, ಶಿವರಾಜಪ್ಪ ಕಾರ್ಯದರ್ಶಿ ಹೇಮಂತ್  ಸಹಾಯಕ  ಮಂಜು ಸೇರಿದಂತೆ  ಗ್ರಾಮಸ್ಥರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular