Friday, November 7, 2025
Google search engine

Homeಸ್ಥಳೀಯಮೈಸೂರಿನಲ್ಲಿ ವಿದ್ಯುತ್ ಬಾಕಿ ವಸೂಲಿ ಅಭಿಯಾನ: ನವೆಂಬರ್ 14ರೊಳಗೆ ಪಾವತಿ ಮಾಡದಿದ್ದರೆ ಸಂಪರ್ಕ ಕಡಿತ

ಮೈಸೂರಿನಲ್ಲಿ ವಿದ್ಯುತ್ ಬಾಕಿ ವಸೂಲಿ ಅಭಿಯಾನ: ನವೆಂಬರ್ 14ರೊಳಗೆ ಪಾವತಿ ಮಾಡದಿದ್ದರೆ ಸಂಪರ್ಕ ಕಡಿತ

 ಮೈಸೂರು: ಅವಧಿ ಮೀರಿದ್ದರೂ ವಿದ್ಯುತ್‌ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಂದ ವಿದ್ಯುತ್‌ ಬಾಕಿ ವಸೂಲಿಗೆ ಸೆಸ್ಕ್‌ ಮುಂದಾಗಿದೆ.

ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸದ ಗ್ರಾಹಕರಿಂದ  ವಿದ್ಯುತ್‌ ಬಿಲ್‌ ಬಾಕಿ ವಸೂಲಾತಿ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಕೆಲವು ಗ್ರಾಹಕರು, ವಿದ್ಯುತ್‌ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಈ ರೀತಿಯಾಗಿ ಬಿಲ್‌ ಬಾಕಿ ಉಳಿಸಿಕೊಂಡಿರುವವರ ವಿದ್ಯುತ್ ಬಾಕಿ ವಸೂಲಿಗೆ ಸೆಸ್ಕ್‌ ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಪ್ರಕಾರ ವಿದ್ಯುತ್ ಸರಬರಾಜಿನ, ವಿತರಣಾ ಲೈಸೆನ್ಸ್‌ದಾರರ ಷರತ್ತುಗಳು 2004 ಅನುಬಂಧ-04ರ ನಿಯಮ 4.18(ಜೆ) ಪ್ರಕಾರ “ಗ್ರಾಹಕರು ಬಿಲ್‌ ಪಾವತಿಗೆ ನೀಡಿರುವ ದಿನಾಂಕದೊಳಗೆ ಬಿಲ್‌ ಪಾವತಿಸದಿದ್ದರೆ, ನಿಗದಿತ ಗಡುವಿನ ದಿನಾಂಕದ ನಂತರ ಶುಲ್ಕ ಪಾವತಿಸದ ಗ್ರಾಹಕರಿಗೆ 15 ದಿನಗಳ ಸ್ಪಷ್ಟ ನೋಟೀಸ್ ನೀಡಿ, ಬಾಕಿ ಪಾವತಿಸದ ಕಾರಣಕ್ಕೆ ವಿದ್ಯುತ್ ಮೀಟರ್‌/ಮಾಪಕಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಲೈಸೆನ್ಸ್‌ದಾರರು ಹೊಂದಿರುತ್ತಾರೆ”. ಅಲ್ಲದೇ ನಿಯಮ 2.11ರ ಪ್ರಕಾರ “ಬಿಲ್‌ ವಿತರಿಸಿದ ಬಳಿಕ 15 ದಿನಗಳ ಅವಧಿ ಬಿಲ್‌ ಪಾವತಿಗೆ ಅಂತಿಮ ಗಡುವಾಗಿದೆ.”

“ಗ್ರಾಹಕರಿಗೆ ನೀಡುವ ಮಾಸಿಕ ಬಿಲ್‌ ನ ಹಿಂಬದಿಯ ಸೂಚನೆ 1ರಲ್ಲಿ ನಿಗದಿತ ದಿನದೊಳಗೆ ಬಿಲ್‌ ಪಾವತಿಸದಿದ್ದಲ್ಲಿ ಈ ಬಿಲ್‌ ಅನ್ನೇ ವಿದ್ಯುತ್‌ ಸರಬರಾಜು ನಿಲ್ಲಿಸುವ 15 ದಿನಗಳ ನೋಟೀಸ್ ಎಂದು ಪರಿಗಣಿಸಬೇಕು ಎಂದು ನಮೂದಿಸಲಾಗಿದೆ ಹಾಗೂ ಹಿಂದಿನ ಬಾಕಿಗೆ ವಾಯ್ದೆ ದಿನಾಂಕ ಅನ್ವಯಿಸುವುದಿಲ್ಲ” ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನವೆಂಬರ್‌ 14, 2025ರಂದು ಕಂದಾಯ ವಸೂಲಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಪ್ರವರ್ಗದ ವಿದ್ಯುತ್‌ ಗ್ರಾಹಕರು, ಸರ್ಕಾರಿ ಇಲಾಖೆ ಒಳಗೊಂಡಂತೆ ತಮ್ಮ ಮೀಟರ್‌/ಮಾಪಕಗಳ ವಿದ್ಯುತ್‌ ಶುಲ್ಕ ಬಾಕಿಯನ್ನು ನವೆಂಬರ್‌ 14, 2025 ರೊಳಗೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಅಧಿಕೃತ ನಗದು ಕೌಂಟರ್ ಅಥವಾ ಆನ್‌ ಲೈನ್‌ ಮೂಲಕ ಪಾವತಿಸುವಂತೆ ಕೋರಲಾಗಿದೆ ಎಂದು ಕೆಎಂ ಮುನಿಗೋಪಾಲರಾಜು ತಿಳಿಸಿದ್ದಾರೆ.

ನಿಗದಿತ ದಿನಾಂಕದೊಳಗೆ ವಿದ್ಯುತ್‌ ಶುಲ್ಕ ಬಾಕಿ ಪಾವತಿಸದ ಮೀಟರ್‌/ಮಾಪಕಗಳಿಗೆ ನವೆಂಬರ್‌ 14, 2025ರ ನಂತರ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಕಡಿತಗೊಳಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ಗ್ರಾಹಕರು ಈ ಕ್ರಮಕ್ಕೆ ಆಸ್ಪದ ನೀಡದೆ ತಮ್ಮ ವಿದ್ಯುತ್‌ ಮೀಟರ್‌/ಮಾಪಕಗಳ ವಿದ್ಯುತ್‌ ಶುಲ್ಕದ ಬಾಕಿಯನ್ನು ತುರ್ತಾಗಿ ಪಾವತಿಸುವಂತೆ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ್ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಮೀಟರ್‌/ಮಾಪಕಗಳಿಗೆ (ತುರ್ತು ಸೇವೆಗಳನ್ನು ಹೊರತುಪಡಿಸಿ,) ನಿಯಮಾನುಸಾರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಆದ್ದರಿಂದ ವಿದ್ಯುತ್‌‌ ಶುಲ್ಕ ಬಾಕಿ ಉಳಿಸಿಕೊಂಡಿರುವ ಗ್ರಾಹಕರು, ತುರ್ತಾಗಿ ತಮ್ಮ ವಿದ್ಯುತ್‌ ಸ್ಥಾವರದ ಬಾಕಿ ಪಾವತಿಸಿ ಇಲಾಖೆಯೊಂದಿಗೆ ಸಹಕರಿಸಬೇಕಿದೆ ಎಂದು ಕೆ.ಎಂ ಮುನಿಗೋಪಾಲ್ ರಾಜು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular