ರಾಮನಗರ: ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ತೋರಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎಂದು ದೇವಾಂಗ ಸಮುದಾಯದ ಹಿರಿಯ ಮುಖಂಡರಾದ ಹನುಮಂತಯ್ಯ ಅವರು ತಿಳಿಸಿದರು.
ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಚನಗಳನ್ನು ಆಲಿಸುವುದರಿಂದ ಜೀವನದಲ್ಲಿ ಸ್ಫೂರ್ತಿ ಹೆಚ್ಚುತ್ತದೆ. ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಶರಣರ ವಚನಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರರಾದ ರಮೇಶ್ ಬಾಬು, ಸಮುದಾಯದ ಮುಂಖಡರುಗಳಾದ ವರದರಾಜು, ಗಿರೀಶ್ ಕುಮಾರ್, ದಯಾನಂದ್, ಮಾಗಡಿ ಚಂದ್ರಶೇಖರ್, ಪವನ್ ಕುಮಾರ್, ಶೇಷಾದ್ರಿ, ರಾಚಯ್ಯ, ನಟರಾಜ್, ಲಕ್ಷ್ಮೀನರಸಪ್ಪ, ಹನುಮಂತ ಹಾಗೂ ಇತರರು ಉಪಸಿತ್ಥರಿದ್ದರು.