Wednesday, May 21, 2025
Google search engine

Homeರಾಜ್ಯಸುದ್ದಿಜಾಲಉದ್ಯೋಗ ಖಾತ್ರಿ ನಡೆ ; ಸುಸ್ಥಿರತೆ ಕಡೆ ಅಭಿಯಾನ

ಉದ್ಯೋಗ ಖಾತ್ರಿ ನಡೆ ; ಸುಸ್ಥಿರತೆ ಕಡೆ ಅಭಿಯಾನ

ಹೆಚ್‍.ಡಿ.ಕೋಟೆ: ಹೆಚ್‍.ಡಿ.ಕೋಟೆ ತಾಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ನಡೆ ; ಸುಸ್ಥಿರತೆಯ ಕಡೆ ಎಂಬ ಅಭಿಯಾನವನ್ನು ಆರಂಭ ಮಾಡಿದ್ದು, ಸದರಿ ಕಾರ್ಯಕ್ರಮಕ್ಕೆ ಎಚ್ ಡಿ ಕೋಟೆ ತಾಲೂಕಿನ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿರುವ ಧರಣೇಶ್ ರವರು ಚಾಲನೆಯನ್ನು ನೀಡಿದರು.

ನಂತರ ಮಾತನಾಡಿದ ಅವರು ಅಭಿಯಾನದ ಗುರಿ ಮತ್ತು ಉದ್ದೇಶದ ಬಗ್ಗೆ ಮಾಹಿತಿಯನ್ನು ನೀಡಿ, ಉದ್ಯೋಗ ಖಾತ್ರಿ ಕಾಯ್ದೆಯಡಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ 2024-25ನೇ ಸಾಲಿಗೆ ಕ್ರಿಯಾ ಯೋಜನೆಯನ್ನ ತಯಾರಿಸಲು ಯಾವ ಯಾವ ಕಾಮಗಾರಿಗಳನ್ನ ಹಮ್ಮಿಕೊಳ್ಳಬಹುದು ಎಂಬುದರ ಬಗ್ಗೆ ಜನರಲ್ಲಿ ಅರಿವನ್ನ ಮೂಡಿಸಿ, ಗ್ರಾಮಗಳನ್ನು ನರೇಗಾ ಕಾಮಗಾರಿಗಳ ಮೂಲಕ ಅಭಿವೃದ್ಧಿಯನ್ನು ಪಡಿಸಲು ಮತ್ತು ಜನರ ಜೀವನ ಮಟ್ಟವನ್ನು ಸುಧಾರಿಸಲು ಸಮಾಜದಲ್ಲಿ ಸುಸ್ಥಿರತೆಯನ್ನು ಕಾಪಾಡಲು ಜನಪ್ರತಿನಿಧಿಗಳು, ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಜೊತೆಗೂಡಿ, ಎಲ್ಲರ ಸಹಕಾರದೊಂದಿಗೆ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಹಾಗೂ ಜನರು ಪಂಚಾಯಿತಿ ಮಟ್ಟದಲ್ಲಿ ಸಿಗುವಂತ ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ತಮ್ಮ ಜೀವನ ಮಟ್ಟವನ್ನ ಸುಧಾರಿಸಿಕೊಳ್ಳಬೇಕು ಎಂದು ಮನವಿಯನ್ನು ಮಾಡಿದರು.

ಸದರಿ ಅಭಿಯಾನ ಕಾರ್ಯಕ್ರಮದಲ್ಲಿ ಎಚ್ ಡಿ ಕೋಟೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಧರಣೇಶ್ , ಸಹಾಯಕ ನಿರ್ದೇಶಕ ರಘುನಾಥ್ ಹಾಗೂ ಪಿಡಿಓ ಜಯರಾಜ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಹಾಗೂ ಪಂಚಾಯತಿಯ ಸಿಬ್ಬಂದಿ ವರ್ಗದವರು ಸೇರಿದಂತೆ ಸಾರ್ವಜನಿಕರು
ಹಾಜರಿದ್ದರು.

RELATED ARTICLES
- Advertisment -
Google search engine

Most Popular