Friday, June 5, 2026
Google search engine

Homeಸ್ಥಳೀಯಮೂತ್ತೂಟ್ ಪಿನ್ ಕಾರ್ಪ್ ವತಿಯಿಂದ ಪರಿಸರ ದಿನ ಆಚರಣೆ : ಅರಣ್ಯ ಉಳಿಸಿ, ನೆಲ-ಜಲ ಸಂರಕ್ಷಿಸಿ...

ಮೂತ್ತೂಟ್ ಪಿನ್ ಕಾರ್ಪ್ ವತಿಯಿಂದ ಪರಿಸರ ದಿನ ಆಚರಣೆ : ಅರಣ್ಯ ಉಳಿಸಿ, ನೆಲ-ಜಲ ಸಂರಕ್ಷಿಸಿ : ಎಚ್.ಜೆ.ಜಯಶಂಕರ್

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಅರ.ನಗರ : ಮನುಷ್ಯ ಸಂಕುಲ ಉಳಿವಿಗಾಗಿ ಪರಿಸರ ರಕ್ಷಣೆಗಾಗಿ ಮರ ಗಿಡಗಳ ಉಳಿವಿನ ಹೊಣೆ
ಪ್ರತಿಯೊಬ್ಬರ ಮೇಲಿದೆ ಎಂದು ಹೊಸೂರು ಮೂತ್ತೂಟ್ ಪಿನ್ ಕಾರ್ಪ್ ನ ವ್ಯವಸ್ಥಾಪ ಎಚ್.ಜೆ.ಜಯಶಂಕರ್ ಕೋಟಿ ಹೇಳಿದರು.

ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಚೆಸ್ಕಾಂ ಶಾಖೆಯ ಅವರಣದಲ್ಲಿ ಮೂತ್ತೂಟ್ ಪಿನ್ ಕಾರ್ಪ್ ವತಿಯಿಂದ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅರಣ್ಯ ನಾಶ ದಿಂದ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕುಡಿಯುವ ನೀರಿಗೂ ಪರಿತಪಿಸಬೇಕಾದ ದಿನಗಳು ಎದುರಾಗು ತ್ತಿವೆ. ಗಿಡಮರಗಳನ್ನು ಕಡಿದು ಕಾಡನ್ನು ಬರಿದಾಗಿಸುತ್ತಿರುವು ದರಿಂದ ಮಳೆ ಕೊರತೆಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಉತ್ತಮ ಮಳೆಗಾಗಿ ಪ್ರತಿದಿನವೂ ಸಸಿ ನೆಟ್ಟು ಅವುಗಳನ್ನು ಬೆಳೆಸಲು ಪಣತೊಡಬೇಕು. ಪರಿಸರವನ್ನು ಸಂರಕ್ಷಿಸಿ, ನೆಲ-ಜಲವನ್ನು ಉಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಹೊಸೂರು ಮೂತ್ತೂಟ್ ಪಿನ್ ಕಾರ್ಪ್ ನ ಸಿಬ್ಬಂದಿಗಳಾದ ಎಚ್.ಎಲ್.ಶಂಶಾಕ್ ಗೌಡ, ಎಚ್.ಎ ಕಿರಣ್, ಬಿಂದು, ಆಯನ,ಚೆಸ್ಕಾಂನ ಸಿಬ್ಬಂದಿಗಳಾದ ಕೋಗಿಲೂರು ಸಂತೋಷ್, ಜಲೇಂದ್ರ ಸೇರಿದಂತೆ ಮತ್ತಿತರು ಹಾಜರಿದ್ದರು.

RELATED ARTICLES
- Advertisment -
Google search engine

Most Popular