Thursday, May 22, 2025
Google search engine

Homeರಾಜ್ಯಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸ್ನೇಹಲ್ ಸುಧಾಕರ ಲೋಖಂಡೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸ್ನೇಹಲ್ ಸುಧಾಕರ ಲೋಖಂಡೆ

ಶಿವಮೊಗ್ಗ: ಪರಿಸರವಿದ್ದರೆ ನಾವು. ಹಾಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಮುಖ್ಯ ಜವಾಬ್ದಾರಿ ಎಂದು ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಂಯುಕ್ತಾಶ್ರಯದಲ್ಲಿ ಗಾಡಿಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ‘ಸಸ್ಯ ಶ್ಯಾಮಲಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಹೆಚ್ಚು ಕಾಡುಗಳು ನಾಶವಾಗುತ್ತಿರುವುದನ್ನು ನಾವು ನೋಡಿದ್ದೇವೆ. ಅರಣ್ಯ ನಾಶವಾದಷ್ಟೂ ಪರಿಸರದ ಮೇಲೆ ದುಷ್ಪರಿಣಾಮ ಹೆಚ್ಚುತ್ತದೆ. ಹಾಗಾಗಿ ಗಿಡಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಿಸಬೇಕು. ಇದು ನಮ್ಮ ಜವಾಬ್ದಾರಿ ಮತ್ತು ಇಂದಿನ ತುರ್ತು ಪರಿಸ್ಥಿತಿ. ಪರಿಸರ ಸಂರಕ್ಷಣೆಯ ವಿಷಯದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದು, ಪ್ರತಿ ಮಗುವೂ ತಮ್ಮ ಮನೆ ಮತ್ತು ಶಾಲೆಗಳಲ್ಲಿ ಒಂದನ್ನಾದರೂ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು. ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 18718 ಹಾಗೂ ಪ್ರೌಢಶಾಲಾ ಮಕ್ಕಳಿಗೆ 5566 ಹಾಜರಾತಿ ಹಾಗೂ ಸ್ಥಳಾವಕಾಶದ ಆಧಾರದ ಮೇಲೆ ಆಯ್ದ ಶಾಲೆಗಳಲ್ಲಿ ಒಟ್ಟು 24284 ಸಸಿಗಳನ್ನು ನೆಡಲಾಗುವುದು. ಮಕ್ಕಳು ಪರಿಸರದ ಬಗ್ಗೆ ಹೆಚ್ಚು ಜಾಗೃತರಾಗಬೇಕು.

ಸಸಿಗಳನ್ನು ನೆಟ್ಟ ನಂತರ ಒಂದು ವಾರಕ್ಕೆ 10 ಲೀಟರ್ ನೀರು ಹಾಕಬೇಕು. ಸಸಿ ನೆಟ್ಟ ನಂತರ ಉಸ್ತುವಾರಿ ಮಕ್ಕಳಿಗೆ ಗಿಡಗಳನ್ನು ವಿತರಿಸಲಾಗುವುದು. ಮಕ್ಕಳು ಸತತ 3 ವರ್ಷಗಳ ಕಾಲ ಗಿಡಗಳಿಗೆ ನೀರು ಹಾಕಿ ಪೋಷಿಸಬೇಕು. ಚೆನ್ನಾಗಿ ಬೆಳೆದ ಮಕ್ಕಳನ್ನು ಶಾಲೆಯಲ್ಲಿ ಪುರಸ್ಕರಿಸಲಾಗುವುದು ಎಂದು ಹೇಳಿದರು. ಬಿಇಒ ನಾಗರಾಜ್ ಪ್ರಮಾಣಿಕವಾಗಿ ಮಾತನಾಡಿ, ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಜಾಗವಿರುವ ಶಾಲೆಗಳ ಸುತ್ತ ಒಂದು ವರ್ಷದಲ್ಲಿ 50 ಲಕ್ಷ ಸಸಿಗಳನ್ನು ನೆಡುವ ಸರಕಾರದ ವಿನೂತನ ಕಾರ್ಯಕ್ರಮಕ್ಕೆ ಇಂದು ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ.

ಎಸ್.11ರಿಂದ 15ರವರೆಗೆ 5 ದಿನಗಳ ಕಾಲ ಶಾಲಾ-ಪಿಯು ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಗಾಡಿಕೊಪ್ಪದ ಶಾಲಾ ಆವರಣದಲ್ಲಿ ಜಿ. ಪಂ ಸಿಇಒ, ಅರಣ್ಯ ಇಲಾಖೆ ಆರ್ ಎಫ್ ಒ, ಡಿಡಿಪಿಐ, ಬಿಇಒ ಸೇರಿದಂತೆ ಗಣ್ಯರು ವಿವಿಧ ಗಿಡಗಳನ್ನು ನೆಟ್ಟು ನೀರುಣಿಸಿದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಆರ್‌ಎಫ್‌ಒ ಪ್ರದೀಪ್‌ಕುಮಾರ್‌, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್‌, ಶಾಲಾ ಮುಖ್ಯ ಶಿಕ್ಷಕಿ ಭುವನೇಶ್ವರಿ, ಡಿಡಿಪಿಐ ಕಚೇರಿ ತಾಂತ್ರಿಕ ಸಹಾಯಕಿ ಲಕ್ಷ್ಮೀ ಎಚ್‌.ಸಿ., ಸಿಆರ್‌ಪಿ ಶೈಲಶ್ರೀ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular