ಹುಣಸೂರು : ಇತ್ತೀಚಿಗೆ ಏಡ್ಸ್ ಎಂಬ ಮಹಾಮಾರಿ ಅಳಿವಿನ ಅಂಚಿನಲ್ಲಿದ್ದರೂ ಏಡ್ಸ್ ನಿಂದ ಬಳಲುತ್ತಿರುವವರಿಗೆ.ಆತ್ಮಸ್ಥೈರ್ಯದ ಅವಶ್ಯಕತೆ ಇದೆ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ ತಿಳಿಸಿದರು
ನಗರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು, ತಾಲೂಕು ಕಾನೂನು ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಹುಣಸೂರು ರೋಟರಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ,ವಿಶ್ವ ಏಡ್ಸ್ ದಿನಾಚರಣೆ. ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಏಡ್ಸ್ ರೋಗಿಗಳನ್ನು ಮಡಿವಂತಿಕೆ ಮಾಡಿ ದೂರವಿಡುವ ಬದಲು. ಒಂದಾಣಿಕೆಯಿಂದ ಅರಿವಿನ ಮೂಲಕ. ಏಡ್ಸ್ ಒಂದು ರೋಗವಲ್ಲ ಅಲ್ಲ ಎಂದು ಜಾಗೃತಿ ಮೂಡಿಸುವ ಪ್ರಯತ್ನವಾಗಬೇಕಿದೆ ಎಂದರು.
ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀ ಮತಿ ಪಾರ್ವತಿ ಹೆಚ್.ಡಿ. ಮಾತನಾಡಿ, ಹುಣಸೂರು ಮತ್ತು ನಗರದಲ್ಲಿ ಅಪ್ರಾಪ್ತ ಬಾಲಕರು, ಬಾಲಕಿಯರು ವಾಹನ ಚಾಲನೆ ಮಾಡುತ್ತಿರುವುದು ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ವಾಹನ ಚಾಲನೆ ಮಾಡಿದರೆ. ಕಾನೂನು ಉಲ್ಲಂಘನೆ ಮಾಡಿದರೆ. ನಿಮ್ಮಪೋಷಕರ ವಿರುದ್ಧ ಕಾನೂನು ರಿತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದರ್ಶನ್.
ಎ.ವಿ. ಮಾತನಾಡಿ, ಕೋವಿಡ್ ಸಂದರ್ಭದಲ್ಲಿ. ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಶಿಕ್ಷಣ ಸಿಗಲಿ ಎಂಬ ಕಾರಣಕ್ಜೆ ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟರು ಆದರೆ ನೀವುಗಳು ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್‌ಬುಕ್, ರೋಲ್ಸ್ ಮೊರೆ ಹೋದಿರಿ. ಎಂದು ಬೇಸರ ವ್ಯಕ್ತಪಡಿಸಿದರು.
ಆದರೆ ಜೀವನ ಅಷ್ಟೇ ಅಲ್ಲ ಎಂಬ ಅರಿವು ನಿಮಗಿರಬೇಕು. ನಿಮ್ಮ ಉಜ್ವಲ ಭವಿಷ್ಯ ಅಕ್ಷರ ಜ್ಞಾನವಾಗಿದೆ.ಆದ್ದರಿಂದ ಅದರ ಕಡೆ ಗಮನವರಿಸಿ. ಜತೆಗೆ ಏಡ್ಸ್ ನಂತ ಡಿಸೀಸ್ ಹತ್ತಿರ ಸುಳಿಯದಂತೆ ಜಾಗೃತಿ ವಹಿಸಿ ಎಂದರು.
ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣ ಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಸ್ನೇಹದಿಂದ ಶುರುವಾಗಿ. ಇಂದು ವಿಶ್ವಾದ್ಯಂತ ಅಕ್ಷರ, ಆರೋಗ್ಯ, ದಾಸೋಹ ಮತ್ತು ಆರೋಗ್ಯ ವಿಶ್ವಸಂಸ್ಥೆಯ ಜತೆಗೂಡಿ. ಪೋಲಿಯೊ ಎಂಬ ಮಾರಕ ರೋಗವನ್ನು ತಡೆಗಟ್ಟುವಲ್ಲಿ ರೋಟರಿ ಪ್ರಮುಖ ಪಾತ್ರವಹಿಸಿದೆ. ಅದೇ ರೀತಿ ಏಡ್ಸ್ ಮಹಾಮಾರಿನ್ನು ಬುಡಸಮೇತ ಕಿತ್ತೊಗೆಯಲು ಆರೋಗ್ಯ ಇಲಾಖೆಯೊಂದಿಗೆ ಸಹಕಾರಿಯಾಗಿ ನಿಂತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ವಂದನೀಯ ಭಗಿನಿ ಅನಿತಾ ಡಯಾಸ್ ಮಾತನಾಡಿದರು,ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ, ಆರೋಗ್ಯ ಇಲಾಖೆಯ ಚಂದ್ರೇಗೌಡ ಹಾಗು ಹುಣಸೂರು ಸಾರ್ವಜನಿಕ ಆಸ್ಪತ್ರೆಯ ಡಾ. ಶಶಾಂಕ್ ಏಡ್ಸ್ ಬಗ್ಗೆ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ನಿರೂಪಣೆಯನ್ನು ಕಾಲೇಜಿನ ನಂಜುಂಡಸ್ವಾಮಿ ನಡೆಸಿಕೊಟ್ಟರು.



