ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಷಯದ ಬಗ್ಗೆ ಶ್ರದ್ಧೆಯಿಂದ ಸುಧೀರ್ಘ ಅಭ್ಯಾಸ ಮಾಡಿದಲ್ಲಿ ಯಶಸ್ಸು ಕಾಣಬಹುದು ಎಂದು ಅಮೇರಿಕಾದ ಇಲ್ಲಿನಿಯಸ್ ವಿಶ್ವವಿದ್ಯಾನಿಲಯದ ಗ್ರಾಫಿಕ್ ಡಿಸೈನ್ ಪ್ರಾಧ್ಯಾಪಕಿ ಅರ್ಚನಾ ತಿಳಿಸಿದರು.
ತಾಲೂಕಿನ ಮೆಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಹಯೋಗದಲ್ಲಿ ಗ್ರಾಫಿಕ್ ಡಿಸೈನ್ ಮತ್ತು ಕ್ರಿಯೇಟಿವ್ ಡಿಸೈನ್ ತರಬೇತಿ ನೀಡಿ ಅವರು ಮಾತನಾಡಿದರು, ನಮ್ಮ ಭಾಷೆ ಮನೆತನ ಊರು ಮತ್ತು ಕೌಟುಂಬಿಕ ಸಂಬಂಧಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಪ್ರತಿಯೊಬ್ಬರೂ ಹೊಂದಿದಾಗ ಬಾಂಧವ್ಯಗಳು ವೃದ್ಧಿಸುತ್ತವೆ, ಕಳೆದ 30 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರೂ ಭಾರತೀಯ ಸಂಸ್ಕೃತಿ ಮತ್ತು ವೈವಿಧ್ಯತೆ ಮತ್ತೆ ನಮಗೆ ಬೇರೆಲ್ಲಿಯೂ ಕಾಣಸಿಗುವುದಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಮುಗ್ಧತೆ ಹೊಂದಿರುವ ಮಕ್ಕಳನ್ನು ನೋಡಿದಾಗ ಮಕ್ಕಳಲ್ಲಿ ದೇವರನ್ನು ಕಾಣಬಹುದು, ಗುರು ಹಿರಿಯರೊಂದಿಗೆ ಉತ್ತಮ ಒಡನಾಟ ಹಾಗೂ ಪೋಷಕರಿಗೆ ಗೌರವ ನೀಡಿದಾಗ ನಾವು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಬಹುದು, ಈ ಹಿಂದೆ ನಮ್ಮ ಪತಿ ಚಂದ್ರಶೇಖರ್ ಅವರ ಸ್ವಗ್ರಾಮ ಮೆಲ್ಲಹಳ್ಳಿಗೆ ಆಗಮಿಸಿದ್ದಾಗ ಶಾಲಾ ವಿದ್ಯಾರ್ಥಿಗಳನ್ನು ಕಂಡು ಇವರಿಗೆ ನನ್ನ ಕೈಲಾದ ಕೊಡುಗೆ ನೀಡಬೇಕೆಂಬ ಮಾತು ಹೇಳಿದ್ದೆ ಅದರಂತೆ ಇಂದು ಶಾಲೆಗೆ ಬಂದು ಅವರಿಗೆ ತರಬೇತಿ ನೀಡಿ ಅವರಲ್ಲಿನ ಪ್ರತಿಭೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ನಿವೃತ್ತ ಇಂಜಿನಿಯರ್ ಹಾಗೂ ಉದ್ಯಮಿ ಎಂ.ಬಿ ಚಂದ್ರಶೇಖರ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ವಿಶೇಷ ಕೌಶಲ್ಯತೆಯನ್ನು ಹೊಂದಿರುತ್ತಾನೆ ಅಂತಹ ವಿದ್ಯಾರ್ಥಿಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ವಿಪುಲ ಅವಕಾಶಗಳಿದ್ದು ಶ್ರದ್ಧಾ ಭಕ್ತಿ ಪೂರ್ವಕವಾಗಿ ಕಲಿಕೆಯತ್ತ ಗಮನಹರಿಸಬೇಕು, ಮೆಲ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿ ಅಮೆರಿಕದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಯಶಸ್ವಿಯಾಗಿ ವೃತ್ತಿ ದೊರಕಲು ತಮಗೆ ಪರಿಶ್ರಮ ಹಾಗೂ ನನ್ನ ಕುಟುಂಬದವರ ಮಾರ್ಗದರ್ಶನ ಕಾರಣ ಎಂದು ತಮ್ಮ ಸ್ವಅನುಭವ ಹಂಚಿಕೊಂಡು ಮೆಲ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ ಬಾಲ್ಯದ ನೆನಪು ಮೆಲುಕು ಹಾಕಿದರು, ನಮ್ಮ ಸಂಸ್ಕಾರ ಸಂಸ್ಕೃತಿ ನಮ್ಮನ್ನು ಕೊನೆಯವರೆಗೂ ಕಾಪಾಡಲಿದೆ, ಹಿರಿಯರ ಅನುಭವದಂತೆ ಪ್ರತಿಯೊಬ್ಬರು ಒಳ್ಳೆಯವನಾಗಿರಬೇಕು ಮತ್ತು ಒಳ್ಳೆಯದನ್ನೇ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ವಲಯ 6 ರ ವಲಯ ಸೇನಾನಿ ಕೆ.ರಮೇಶ್, ರೋಟರಿ ಐಕಾನ್ಸ್ ಅಧ್ಯಕ್ಷ ಎಂ.ಬಿ ಸಂಪತ್, ಮಾಜಿ ಅಧ್ಯಕ್ಷ ಜೆ.ಎಸ್ ನಾಗರಾಜ್, ಕಾರ್ಯದರ್ಶಿ ಬಿ.ಎಸ್ ಸತೀಶ್ ಆರಾಧ್ಯ, ಪದಾಧಿಕಾರಿಗಳಾದ ಸಿ.ಎನ್ ವಿಜಯ್, ಡಿ.ರಮೇಶ್, ಬಿ.ಎಸ್ ಪ್ರಸನ್ನ ಕುಮಾರ್, ಪತ್ರಕರ್ತ ಇಂತಿಯಾಜ್ ಅಹಮದ್, ಶಾಲೆಯ ಮುಖ್ಯ ಶಿಕ್ಷಕ ಎಸ್.ಎಸ್ ಪುಟ್ಟಸ್ವಾಮಿ, ಶಿಕ್ಷಕ ಎಂ.ಬಿ.ಚಂದ್ರು ಮತ್ತು ಅಡಿಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
