ಚನ್ನಪಟ್ಟಣ: ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದಾಗ ಮಾತ್ರ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಸಾಧ್ಯ ಎಂದು ಡಾ. ಟಿ.ವಿ.ಶಂಕರ್ ಅವರು ಕಿವಿಮಾತು ಹೇಳಿದರು. ಪಟ್ಟಣದ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿನ ಪ್ರೌಡಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಸಹಯೋಗದಲ್ಲಿ ರೇಷ್ಮೆನಾಡು ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ) ವತಿಯಿಂದ ಆಯೋಜಿಸಲಾಗಿದ್ದ ಮಾನವೀಯ ಮೌಲ್ಯ ಬಿತ್ತೋಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತಮ ವಿದ್ಯಾಭ್ಯಾದ ಪ್ರಮುಖ ಹಂತವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮೇಲೆ ಪೋಷಕರು ಹಾಗೂ ಶಿಕ್ಷಕರು ಒತ್ತಡ ಹಾಕುವುದು ಸಹಜ.
ಇದನ್ನು ಗಮನದಲ್ಲಿಟ್ಟಿಕೊಂಡು ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡುವ ಜೊತೆಗೆ ಪ್ರತಿಯೊಂದು ಪಾಠಧ ಅರ್ಥವನ್ನು ತಿಳಿದುಕೊಂಡು ಮನನ ಮಾಡಿಕೊಂಡು ಪರೀಕ್ಷೆಯನ್ನು ಎದುರಿಸಬೇಕು, ಜೊತೆಗೆ ಪರೀಕ್ಷೆಯ ಸಮಯದಲ್ಲಿ ಆಸತ್ಮವಿಶ್ವಾಸ ಕಳೆದುಕೊಳ್ಳದೆ ಮೊದಲ ಒಂದು ಗಂಟೆಗಳ ಅವಧಿಯಲ್ಲಿ ನಿಮಗೆ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಬಳಿಕ ಉಳಿದ ಪ್ರಶ್ನೆಗಳತ್ತ ಗಮನ ನೀಡಿದಾಗ ಪರೀಕ್ಷೆ ನಿಮಗೆ ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.
ನೇತ್ರದಾನದ ಬಗ್ಗೆ ವಿದ್ಯಾರ್ಥಿಗಳಿಂದ ಮಾತ್ರ ಅರಿವು ಮೂಡಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಕುಟುಂಬ ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ನೇತ್ರದಾನದ ಬಗ್ಗೆ ಪ್ರೇರೇಪಣೆ ಮಾಡಲು ಮುಂದಾಗಬೇಕು. ಯಾರೆ ಮೃತಪಟ್ಟರೂ ನಾಲ್ಕೈದು ಗಂಟೆಗಳಲ್ಲಿ ಅವರ ಕಣ್ಣುಗಳನ್ನು ಡಾ. ರಾಜ್‌ನೇತ್ರಾಲಯಕ್ಕೆ ದಾನ ಮಾಡುವ ಬಗ್ಗೆ ಅಥವಾ ಹತ್ತಿರದ ಹೈಬ್ಯಾಂಕ್‌ಗಳಿಗೆ ದಾನ ಮಾಡುವ ಬಗ್ಗೆ ಪ್ರೇರೇಪಣೆ ಮಾಡಿ ವೈದ್ಯರ ಸಹಕಾರದಿಂದ ನೇತ್ರದಾನ ಮಾಡಿಸಿದರೆ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳು ಇಬ್ಬರು ಅಂಧರ ಬಾಳಿಗೆ ಬೆಳಗಾಗಿ ಹತ್ತಾರು ವರ್ಷಗಳು ಪ್ರಪಂಚವನ್ನು ಕಾಣುವಂತಾಗುತ್ತದೆ ಎಂದು ಡಾ. ಟಿ.ವಿ.ಶಂಕರ್‌ಅವರು ನೇತ್ರದಾನದ ಬಗ್ಗೆ ವಿದ್ಯಾಥಿಗಳಿಗೆ ಅರಿವು ಮೂಡಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ಪ್ರೌಡಶಾಲೆಯನ್ನು ದತ್ತು ಪಡೆದಿರುವ ರಮೇಶ್‌ಗೌಡ ಅವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಜೊತೆಗೆ ಸಮಾಜಕ್ಕೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವುದು ಅಗತ್ಯವಿದೆ.
ಇದಕ್ಕಾಗಿ ಏಕಾಗ್ರತೆಯಿಂದ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಹೋಗಲಾಡಿಸಲು ಪರಿವರ್ತನಾ ಶಾಲೆಯ ರೂವಾರಿ ಚೇತನ್‌ರಾಮ್ ಅವರು ಬರೆದಿರುವ ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತಿದ್ದು ಈ ಪುಸ್ತಕಗಳನ್ನು ಏಕಾಗ್ರತೆಯಿಂದ ಓದಿದೆ ಪರೀಕ್ಷೆಯನ್ನು ಎದುರಿಸಲು ಇರುವ ಸರಳ ಮಾರ್ಗಗಳನ್ನು ಅನುಸರಿಸಿ ಒತ್ತಡ ಇಲ್ಲದೆ ಪರೀಕ್ಷೆಗಳನ್ನು ಬರೆಯಬಹುದು ಎಂದು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಮಕ್ಕಳಿಗೆ ರೈತರು ಕೃಷಿಯಲ್ಲಿ ಅನುಭವಿಸುವ ಕಷ್ಟಗಳ ಬಗ್ಗೆ ಅರಿವಿದೆ, ಕ್ರಿಕೆಟ್ ಸ್ಟಾರ್‌ಗಳು, ಸಿನಿಮಾ ನಟರ ಮೇಲಿನ ಅಭಿಮಾನದಿಂದ ವಿದೇಶಿ ಕಂಪನಿಗಳು ಉತ್ಪಾದಿಸುವ ಪೆಪ್ಸಿ, ಕೋಕಾಕೋಲಾ ದಂತರ ತಂಪು ಪಾನಿಯಗಳನ್ನು ಉಪಯೋಗಿಸುವುದನ್ನು ಬಿಟ್ಟ ನಿಮ್ಮ ಹಳ್ಳಿಯಲ್ಲಿ ನಿಮ್ಮ ರೈತರೇ ಬೆಳೆಯುವ ಸ್ವದೇಶಿ ವಸ್ತುಗಳಾದ ಎಳನೀರು, ಕಬ್ವಿನ ಹಾಲಿನ ಬಳಕೆ ಮೂಲಕ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ರೈತರಿಗೆ ಆರ್ಥಿಕ ಬಲ ತುಂಬಲು ಸಹಕಾರಿಯಾಗಿ ಎಂದು ರಮೇಶ್‌ಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಕಜ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಸಯ್ಯದ್ ಮುಜಾಹಿದ್, ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಗೀತಾಂಜಲಿ, ಶಿಕ್ಷಕರುಗಳಾದ ಗುಂಡಪ್ಪ ಮುದಡಗಿ, ಮಂಜುಳಾದೇವಿ, ಲೀಲಾವತಿ, ರಿಹಾನ ತರನಮ್, ರೂವಿ, ಕೃಷ್ಣಪ್ಪ, ಸಂತೋಷ್ ಕುಮಾರ್ ಬಾದಾಮಿಗಾರ್, ಗಿರಿಜಾ, ಶಿವಕುಮಾರ್ ಸೇರಿದಂತೆ ಹಲವರು ಇದ್ದರು.