Thursday, April 2, 2026
Google search engine

Homeರಾಜಕೀಯಅಚ್ಚೇ ದಿನ್ ಬದಲು ದುಬಾರಿ ದರ್ಬಾರ್ : ಕೇಂದ್ರ ಸರ್ಕಾರದ ವಿರುದ್ಧ ಸುರ್ಜೇವಾಲಾ ವಾಗ್ದಾಳಿ

ಅಚ್ಚೇ ದಿನ್ ಬದಲು ದುಬಾರಿ ದರ್ಬಾರ್ : ಕೇಂದ್ರ ಸರ್ಕಾರದ ವಿರುದ್ಧ ಸುರ್ಜೇವಾಲಾ ವಾಗ್ದಾಳಿ

ಬೆಂಗಳೂರು : ಕೇಂದ್ರದ ಮೋದಿ ನೇತೃತ್ವದ ಸರಕಾರ ಮತ್ತು ಬಿಜೆಪಿಯು ಕರ್ನಾಟಕ ರಾಜ್ಯದ ಹಾಗೂ ಭಾರತ ದೇಶದ ಜನರು ಹಿಂದೆಂದೂ ಕಾಣದ ರೀತಿಯಲ್ಲಿ ಜೇಬುಗಳ್ಳತನವನ್ನು ಆರಂಭಿಸಿದೆ. ಬಿಜೆಪಿ ಅಚ್ಚೇ ದಿನ್ ಭರವಸೆ ನೀಡಿತು. ಆದರೆ, ಇದೀಗ ನಮಗೆ ನೀಡಿದ್ದು ದುಬಾರಿ ದರ್ಬಾರ್ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮತ ಕೇಳುವ ಮೊದಲು ಸಾಮಾನ್ಯ ಜನರಿಗೆ ಉತ್ತರ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಗಳ ಬೆಲೆಯನ್ನು 200 ರೂ.ಹೆಚ್ಚಿಸಲಾಗಿದೆ, ಇದರಿಂದ ಒಂದು ಸಿಲಿಂಡರ್ ಬೆಲೆ 2 ಸಾವಿರ ರೂ.ದಾಟಿದೆ. ಕೇವಲ 45 ದಿನಗಳಲ್ಲಿ 3 ಬಾರಿ ಏರಿಕೆಯಾಗಿದೆ. ಮಾರ್ಚ್ ತಿಂಗಳಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆಗಳು ಎರಡು ಬಾರಿ ಏರಿಕೆಯಾಗಿ, ಪ್ರತಿ ಸಿಲಿಂಡರ್‌ಗೆ 913 ರೂ.ತಲುಪಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯು, ಶೀಘ್ರದಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗುವುದರ ಮುನ್ಸೂಚನೆಯಾಗಿದೆ. ಇದಲ್ಲದೆ, ಎಲ್‍ಪಿಜಿ ತೀವ್ರ ಅಭಾವದಿಂದಾಗಿ ಜನರು ದುಪ್ಪಟ್ಟು ದರ ನೀಡಿ ಸಿಲಿಂಡರ್ ಖರೀದಿಸುವಂತಾಗಿರುವುದನ್ನು ಮರೆಯಬಾರದು ಎಂದು ಟೀಕಿಸಿದ್ದಾರೆ.

ಅಲ್ಲದೆ ಇಂದಿನಿಂದ ಟೋಲ್ ತೆರಿಗೆಯನ್ನು ಸಹ ಹೆಚ್ಚಿಸಲಾಗಿದೆ. ಕರ್ನಾಟಕವೊಂದರಲ್ಲೇ 2026-27 ರಲ್ಲಿ 5 ಸಾವಿರ ಕೋಟಿ ರೂ.ಟೋಲ್ ಸಂಗ್ರಹವಾಗುವ ನಿರೀಕ್ಷೆಯಿದೆ ಮತ್ತು ದೇಶಾದ್ಯಂತ 80 ಸಾವಿರ ಕೋಟಿ ರೂ. ಲೂಟಿಯಾಗುತ್ತಿದೆ. ಮೋದಿ ಸರಕಾರವು ಇತ್ತೀಚೆಗೆ ವಾಣಿಜ್ಯ ವಿಮಾನಯಾನ ದರಗಳ ಮೇಲಿನ ಮಿತಿಯನ್ನು ತೆಗೆದುಹಾಕಿದ್ದು, ಇದು ಬೆಲೆ ಏರಿಕೆಯ ಅಲೆ ಎಬ್ಬಿಸಿದೆ. ಮಾರ್ಚ್ ತಿಂಗಳಲ್ಲೇ ವಿಮಾನ ದರಗಳಲ್ಲಿ ಶೇ.10ರಿಂದ 15ರಷ್ಟು ಏರಿಕೆಯಾಗಿದೆ. ದೆಹಲಿ ವಿಮಾನ ಇಂಧನ ದರ ಕಿ.ಲೋ.ಲೀಟರ್ 2 ಲಕ್ಷ ರೂ.ದಾಟಿದ್ದು, ಇದರ ನೇರ ಹೊರೆ ಗ್ರಾಹಕರ ಮೇಲೆ ಬೀಳಲಿದ್ದು, ಟಿಕೆಟ್ ದರ ಶೇ.25ರಷ್ಟು ಹೆಚ್ಚಳವಾಗಲಿದೆ ಎಂದು ಅವರುಗಳು ಎಚ್ಚರಿಸಿದ್ದಾರೆ.

ಹೊಸ ರೈಲ್ವೆ ಟಿಕೆಟ್ ರದ್ದತಿ ನಿಯಮಗಳು, ಎಟಿಎಂ ಹಿಂಪಡೆಯುವಿಕೆ ಶುಲ್ಕಗಳು, ಷೇರು ಮಾರುಕಟ್ಟೆ ವಹಿವಾಟು ತೆರಿಗೆ ಹೆಚ್ಚಳ ಮತ್ತು ಎಸಿಗಳು, ರೆಫ್ರಿಜರೇಟರ್‌ಗಳು, ಖಾದ್ಯ ತೈಲ ಮತ್ತು ಸಿಮೆಂಟ್‌ನಂತಹ ಸರಕುಗಳ ಬೆಲೆ ಏರಿಕೆಯ ಬಗ್ಗೆ ನಾಯಕರು ಕೇಂದ್ರ ಸರ್ಕಾರವನ್ನು ಟೀಕಿಸಿದರು.

RELATED ARTICLES
- Advertisment -
Google search engine

Most Popular