Sunday, January 25, 2026
Google search engine

Homeಅಪರಾಧಬೆಟ್ಟೆಗೌಡನದೊಡ್ಡಿಯಲ್ಲಿ ಗೃಹಿಣಿ ಸಾವು ಪತಿಯ ಮೇಲೆ ಕುಟುಂಬಸ್ಥರ ಆರೋಪ

ಬೆಟ್ಟೆಗೌಡನದೊಡ್ಡಿಯಲ್ಲಿ ಗೃಹಿಣಿ ಸಾವು ಪತಿಯ ಮೇಲೆ ಕುಟುಂಬಸ್ಥರ ಆರೋಪ

ರಾಮನಗರ : ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯೋರ್ವರು ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ  ಕನಕಪುರ ತಾಲೂಕಿನ ಬೆಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಪ್ರತಿಭಾ(32) ಮೃತ ದುರ್ದೈವಿಯಾಗಿದ್ದು, ಮನೆಯ ಸ್ವಿಮ್ಮಿಂಗ್​​ ಪೂಲ್​​ನಲ್ಲಿ ಮೃತದೇಹ ಪತ್ತೆಯಾಗಿದೆ. ಪತಿ ನಂಜೇಗೌಡನೇ ಆಕೆಯನ್ನು ಕೊಲೆ ಮಾಡಿರೋದಾಗಿ ಪ್ರತಿಭಾ ಕುಟುಂಬಸ್ಥರು ಆರೋಪಿಸಿದ್ದರೆ, ಅನಾರೋಗ್ಯದ ಹಿನ್ನೆಲೆ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ನಂಜೇಗೌಡ ತಿಳಿಸಿದ್ದಾರೆ.

ಪರಸ್ಪರ ಪ್ರೀತಿಸಿದ್ದ ನಂಜೇಗೌಡ ಮತ್ತು ಪ್ರತಿಭಾ ಹದಿನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ರು. ಇಬ್ಬರಿಗೂ ಮುದ್ದಾದ ಎರಡು ಗಂಡು ಮಕ್ಕಳು ಕೂಡ ಇದ್ದಾರೆ. ಇನ್ನು ನಂಜೇಗೌಡ ಕೋಡಿಗಳ್ಳಿ ಗ್ರಾಮದಲ್ಲಿ ತನ್ನದೇ ಆದ ಸಿಮೆಂಟ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದು, ಸಾಕಷ್ಟು ಸಿರಿವಂತ ಸಹ ಹೌದು. ಹೀಗಿರುವಾಗ ಇವತ್ತು ಬೆಳಿಗ್ಗೆ ಮೃತ ಪ್ರತಿಭಾಳ ಅಕ್ಕನ ಮನೆಯ ಬಳಿ ಬಂದು ಹೆಂಡತಿ ರೂಮ್ ಬಾಗಿಲು ತೆಗೆಯುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ತಕ್ಷಣ ಪ್ರತಿಭಾ ಸಹೋದರ ಪರಮೇಶ್, ಮನೆಗೆ ಹೋಗಿ ಮನೆಯನ್ನಲ್ಲ ಚೆಕ್ ಮಾಡಿದ್ದಾನೆ. ಈ ವೇಳೆ ಎಲ್ಲಿಯೂ ಆಕೆ ಕಂಡುಬಂದಿಲ್ಲ. ತಕ್ಷಣ ಮನೆಯ ಆವರಣದಲ್ಲಿ ಇದ್ದ ಸ್ವಿಮ್ಮಿಂಗ್​​ ಪೂಲ್​​ನಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.

ಅಂದಹಾಗೆ ನಂಜೇಗೌಡಗೆ ಪ್ರತಿಭಾ ಎರಡನೇ ಹೆಂಡತಿ. ಪ್ರಾರಂಭದಲ್ಲಿ ಇಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಎರಡನೇ ಪತ್ನಿ ಪ್ರತಿಭಾಗಾಗಿ ಗ್ರಾಮದ ಹೊರವಲಯದಲ್ಲಿ ಸುಂದರವಾದ ಮನೆಯೊಂದನ್ನೂ ನಂಜೇಗೌ ಕಟ್ಟಿಸಿಕೊಟ್ಟಿದ್ದರು. ಆದರೆ ಮೊದಲ ಹೆಂಡತಿ ವಿಚಾರವಾಗಿ ಇಬ್ಬರ ನಡುವೆ ಆಗಾಗ ಗಲಾಟೆ ಕೂಡ ನಡೆಯುತ್ತಿತ್ತು. ಈ ನಡುವೆ ನಿನ್ನೆ ರಾತ್ರಿ ಅದ್ಯಾವುದೋ ಕಾರಣಕ್ಕೆ ಮನೆಗೆ ಬಂದಿದ್ದ ತನ್ನ ಕುಟುಂಬಸ್ಥರನ್ನು ಕೂಡ ಪ್ರತಿಭಾ ಮನೆಗೆ ವಾಪಸ್​​ ಕಳುಹಿಸಿದ್ದರು. ಆನಂತರ ಏನು ನಡೆದಿದೆ ಎಂಬುದು ಗೊತ್ತಿಲ್ಲ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಪ್ರತಿಭಾ ಮೃತದೇಹ ಸ್ವಿಮ್ಮಿಂಗ್ ಪೂಲ್​​ನಲ್ಲಿ ಪತ್ತೆಯಾಗಿದೆ.

ಇನ್ನು ಪ್ರತಿಭಾ ಪತಿ ನಂಜೇಗೌಡ ಆಕೆ ಹೊಟ್ಟೆನೋವು ಎನ್ನುತ್ತಿದ್ದಳು, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದಾರೆ. ಆದರೆ ಕುಟುಂಬಸ್ಥರು ಮಾತ್ರ ಇದು ಕೊಲೆ ಎಂದು ಆರೋಪಿಸಿದ್ದಾರೆ. ಒಟ್ಟಾರೆ ಪ್ರತಿಭಾ ಸಾವು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಡಿಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES
- Advertisment -
Google search engine

Most Popular