Friday, December 12, 2025
Google search engine

Homeರಾಜ್ಯಸುದ್ದಿಜಾಲ ಮದುವೆ ಬಗ್ಗೆ ಮಾತಾಡೋಣ ಬಾ ಎಂದು ಕರೆಸಿ ಯುವಕನನ್ನುಕೊಂದ ಪ್ರೇಯಸಿಯ ಕುಟುಂಬಸ್ಥರು

 ಮದುವೆ ಬಗ್ಗೆ ಮಾತಾಡೋಣ ಬಾ ಎಂದು ಕರೆಸಿ ಯುವಕನನ್ನುಕೊಂದ ಪ್ರೇಯಸಿಯ ಕುಟುಂಬಸ್ಥರು

ಅಮರಾವತಿ: ಮದುವೆ ಬಗ್ಗೆ ಮಾತಾಡೋಣ ಬಾ ಎಂದು ಕರೆಸಿ ಯುವಕನನ್ನು ಮದುವೆ ಬಗ್ಗೆ ಮಾತಾಡೋಣ ಬಾ ಎಂದು ಕರೆಸಿ ಯುವಕನನ್ನು ಪ್ರೇಯಸಿಯ ಕುಟುಂಬಸ್ಥರು ಬ್ಯಾಟ್‌ನಲ್ಲಿ ಹೊಡೆದು ಕೊಂದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಹತ್ಯೆಯಾದ ಯುವಕನನ್ನು ಜ್ಯೋತಿ ಶ್ರವಣ್ ಸಾಯಿ ಎಂದು ಗುರುತಿಸಲಾಗಿದೆ. ಶ್ರವಣ್ ಸಾಯಿ ಸೇಂಟ್ ಪೀಟರ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಟೆಕ್ ಓದುತ್ತಿದ್ದ ಎಂದು ತಿಳಿದುಬಂದಿದೆ. ಈತ ಶ್ರೀಜಾ (19) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಯುವತಿಯ ಕುಟುಂಬಸ್ಥರು ಆತನಿಗೆ ಬೆದರಿಕೆ ಹಾಕಿ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರವಣ್‌ನನ್ನು ಮನೆಗೆ ಕರೆಸಿ, ಆತ ಬರುತ್ತಿದ್ದಂತೆ ಕುಟುಂಬದ ಸದಸ್ಯರು, ಹಠಾತ್ತನೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆತನ ತಲೆಗೆ ಗಾಯಗಳಾಗಿದ್ದು, ಕಾಲು ಮತ್ತು ಪಕ್ಕೆಲುಬುಗಳು ಮುರಿತಕ್ಕೊಳಗಾಗಿದ್ದವು. ನಂತರ, ಆತನನ್ನು ಕುಕಟ್ಪಲ್ಲಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು.ಅಮೀನ್‌ಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

RELATED ARTICLES
- Advertisment -
Google search engine

Most Popular