ಮೈಸೂರು: ಸಹಕಾರ ಸಂಘಗಳು ಅಭಿವೃದ್ಧಿಯಾಗಬೇಕಾದರೆ ರೈತರು ಸಹಕಾರ ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಕಟ್ಟಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಧನಗಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಿ. ಗುರುಸ್ವಾಮಿ ಮನವಿ ಮಾಡಿದರು.
ಮೈಸೂರು ತಾಲ್ಲೂಕು ಧನಗಳ್ಳಿಯ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಘವು ೧೯೬೪ರಲ್ಲಿ ಸ್ಥಾಪನೆಯಾಗಿದ್ದು, ೧೭೬೩ ಸದಸ್ಯರನ್ನು ಹೊಂದಿದೆ. ಇದುವರೆಗೆ ೨೦೨೨-೨೩ನೇ ಸಾಲಿನಲ್ಲಿ ರೈತರಿಗೆ ಬೆಳೆ ಸಾಲವಾಗಿ ೬ ಕೋಟಿ ರೂ. ಸಾಲ ನೀಡಲಗಿದ್ದು, ಸಂಘಕ್ಕೆ ೨೦೨೨-೨೩ನೇ ಸಾಲಿನಲ್ಲಿ ೩,೧೫,೮೦೨ ಲಕ್ಷ ನಿವ್ವಳ ಲಾಭ ಬಂದಿದೆ.
ಹೊಸದಾಗಿ ೧೨೪ ಜನರಿಗೆ ೧ ಕೋಟಿ ೪ ಲಕ್ಷ ೩೦ ಸಾವಿರ ಸಾಲ ನೀಡಲಾಗಿದ್ದು, ಸಂಘವು ತಾಲ್ಲೂಕಿನಲ್ಲಿಯೇ ೨ನೇ ಸ್ಥಾನದಲ್ಲಿದೆ. ಅಪೆಕ್ಸ್ ಬ್ಯಾಂಕ್‌ನಿಂದ ಸಂಘದ ಕಟ್ಟಡ ನಿರ್ಮಾಣಕ್ಕೆ ೧೦ ಲಕ್ಷ ಬಿಡುಗಡೆಯಾಗಿದ್ದು, ಈ ಹಣ ಸಾಲದಿರುವುದರಿಂದ ಹೆಚ್ಚುವರಿ ೧೫ ಲಕ್ಷ ಹಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಸಾಲ ಕೇಳಿದರೆ ಅವರಿಗೂ ಶೇ. ೪% ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸಿದ್ದಮ್ಮ, ನಿರ್ದೇಶಕರುಗಳಾದ ಎಸ್. ಬಸಪ್ಪ, ಎಸ್. ಜವರೇಗೌಡ, ಬಸವೇಗೌಡ, ಎಂ. ಸಿದ್ದರಾಮ, ಚಿಕ್ಕಣ್ಣ, ಬಿ. ಕಾಳಲಿಂಗೇಗೌಡ, ಸಿದ್ದರಾಜು, ಕೃಷ್ಣಮೂರ್ತಿ, ತಿಮ್ಮಮ್ಮ, ಮೇಲ್ವಿಚಾರಕರಾದ ಕೆ. ವೇಣುಗೋಪಾಲ್, ಕಾರ್ಯನಿರ್ವಾಹಕ ಎಸ್.ಎಂ. ಕೃಷ್ಣ, ಸಿ. ಮಾಲೇಗೌಡ, ರವಿಕುಮಾರ್, ಗೀತಾ, ರಾಜೇಗೌಡ, ಧನಗಳ್ಳಿ ಬಸವರಾಜು ಹಾಗೂ ಸದಸ್ಯರುಗಳು ಹಾಜರಿದ್ದರು.