Saturday, May 24, 2025
Google search engine

Homeರಾಜ್ಯಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ರೈತರು : ವಕ್ಫ್ ಹೆಸರು ತಿದ್ದುಪಡಿ ಆದೇಶಕ್ಕೆ ಸಂತಸ

ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ರೈತರು : ವಕ್ಫ್ ಹೆಸರು ತಿದ್ದುಪಡಿ ಆದೇಶಕ್ಕೆ ಸಂತಸ

ಧಾರವಾಡ : ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆದ್ದ ತಕ್ಷಣ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಇಂದು ಶನಿವಾರ ವಕ್ಫ್ ಮಂಡಳಿ ಸಭೆಯನ್ನು ನಡೆಸಿ, ರೈತರಿಗೆ ನೀಡಿದ ನೋಟಿಸ್ ಗಳನ್ನು ಕೂಡಲೇ ಹಿಂಪಡೆಯಿರಿ ಎಂದು ತಕ್ಷಣ ಆದೇಶ ನೀಡಿದರು. ಈ ಹಿನ್ನೆಲೆಯಲ್ಲಿ ರೈತರು ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ವಕ್ಫ್ ಬೋರ್ಡ್ ನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ರೈತರಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದು ಸರ್ಕಾರ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದರು. ಅಲ್ಲದೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ನಡೆಯನ್ನು ಖಂಡಿಸಿ ತೀವ್ರ ವಿರೋಧಿಸಿದ್ದರು.

ಸಿಎಂ ಸಿದ್ದರಾಮಯ್ಯ ಅವರು ವಕ್ಫ್ ಮಂಡಳಿಯ ಸಭೆ ನಡೆಸಿ ಅಧಿಕಾರಿಗಳಿಗೆ ಕೊಡಲೇ ನೋಟಿಸ್ ಗಳನ್ನು ಹಿಂಪಡೆಯಿರಿ ರೈತರಿಗೆ ಯಾವುದೇ ರೀತಿಯಾಗಿ ತೊಂದರೆ ಕೊಡಬೇಡಿ ಎಂದು ಖಡಕ್ ಸೂಚನೆ ನೀಡಿದ್ದಾರೆ.ಅಲ್ಲದೆ ವಕ್ಫ್ ಹೆಸರು ತಿದ್ದುಪಡಿ ಆದೇಶ ನೀಡಿದ್ದಕ್ಕೆ ರೈತರು ಸಂತಸಗೊಂಡಿದ್ದಾರೆ. ಹಾಗಾಗಿ ಇದು ರೈತರಿಗೆ ಸಿಕ್ಕ ಜಯ ಎಂದು ಸರ್ಕಾರಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯಗೆ ಧಾರವಾಡ ರೈತರು ಧನ್ಯವಾದ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular