ಕುಂಬ್ರ ಮರ್ಕಝುಲ್ ಹುದಾ ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ
- ವರದಿ: ಶಂಶೀರ್ ಬುಡೋಳಿ
ಮನುಷ್ಯ ಭೂಲೋಕಕ್ಕೆ ಬರುವಾಗ ಬರಿ ಕೈಯಲ್ಲಿ ಬರುತ್ತಾನೆ. ಹೋಗುವಾಗಲೂ ಬರಿಕೈಯಲ್ಲೇ ಹೋಗುತ್ತಾನೆ. ಅದರ ಮಧ್ಯೆ ಮಾಡಿದ ಆಸ್ತಿ ಗಳಿಕೆ ಇಲ್ಲದವರಿಗೆ ಹಂಚಿಕೊಂಡಾಗ ಅದು ಮತ್ತಷ್ಟು ಇಮ್ಮುಡಿಗೊಳ್ಳುವುದಲ್ಲದೇ ಮರಣದ ಬಳಿಕ ನಮ್ಮನ್ನು ಸದಾ ಸ್ಮರಿಸುತ್ತದೆ. ಅಲ್ಲಾಹನು ಈ ಝಕರಿಯ್ಯನಿಗೆ ದೊಡ್ಡ ಸಂಪತ್ತು ಕರುಣಿಸಿದ್ದಾನೆ. ಅದನ್ನು ಬಡವರಿಗೆ ನೀಡುತ್ತಾ ಬರುತ್ತಿದ್ದೇನೆ. ಆಗ ಅದು ಮತ್ತಷ್ಟು ಮಗದಷ್ಟು ಹೆಚ್ಚಿರುವುದೇ ವಿನಹ ಕಿಂಚಿತ್ ಕಮ್ಮಿ ಆಗಲಿಲ್ಲ. ಯುವಕನಾಗಿದ್ದಾಗ ಕಷ್ಟಪಟ್ಟು ಮೇಲೇರಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ಒಳ್ಳೆಯ & ಶುದ್ದ ಹೃದಯ, ಸಾಧಿಸಲೇಬೇಕೆಂಬ ವಿಶ್ವಾಸ, ಕಷ್ಟಪಟ್ಟು ಮಾಡುವ ಕೆಲಸ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನಾನೇ ಉದಾಹರಣೆ ಎಂದು ಖ್ಯಾತ ಅನಿವಾಸಿ ಉದ್ಯಮಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಝಕರಿಯ್ಯ ಅಲ್ ಮುಝೈನ್ ಜೋಕಟ್ಟೆ ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಲಾದ ಅಬಿನಂಧನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಡಳಿತ ಸಮಿತಿ ಮತ್ತು ಅತಿಥಿಗಳು ಸೇರಿ ಶಾಲು ಹೊದಿಸಿ ಬೃಹತ್ ಗಾತ್ರದ ಸ್ಮರಣಿಕೆ ನೀಡಿ ಅವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷರಾದ ಅರಿಯಡ್ಜ ಅಬ್ದುರ್ರಹ್ಮಾನ್ ಹಾಜಿಯವರು ವಹಿಸಿದ್ದರು. ಝಕರಿಯ್ಯ ಹಾಜಿಯವರ ಮಾದರಿ ಬದುಕನ್ನು ಸಂಕ್ಷಿಪ್ತವಾಗಿ ಹೇಳಿ ಶುಭ ಹಾರೈಕೆ ಮಾಡಿದರು.
ಕಾರ್ಯಾಧ್ಯಕ್ಷರಾದ ಡಾ.ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ರವರು ಅವರ ಜೀವನದ ಬದಲಾದ ವಿವಿಧ ವಿಚಾರಗಳನ್ನು ಮುಂದಿಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅನಿವಾಸಿ ಉದ್ಯಮಿ ಫಾರೂಕ್ ಹಾಜಿ ಕನ್ಯಾನ ಸಭೆಯನ್ನು ಉದ್ಘಾಟಿಸಿದರು.
ಶರೀಅತ್ ವಿಭಾಗದ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು.
ಸಭೆಯಲ್ಲಿ ಎಂ ಎಚ್ ಕೆ ಸೌದಿ ಪ್ರಮುಖರಾದ ಅಂತಾರಾಷ್ಟ್ರೀಯ ಕೌನ್ಸಲರ್ ಕಮರುದ್ದೀನ್ ಗೂಡಿನಬಳಿ, ಅನಿವಾಸಿ ಉಧ್ಯಮಿಗಳಾದ ಅಬ್ದುರ್ರಹ್ಮಾನ್ ಅರಮೆಕ್ಸ್ ಜುಬೈಲ್, ಅಂಜದ್ ಖಾನ್ ಪೋಳ್ಯ, ಕೆ.ಎಚ್ ರಫೀಕ್ ಸೂರಿಂಜೆ ಜುಬೈಲ್, ಬಶೀರ್ ತಲಪಾಡಿ ರಿಯಾದ್, ಹಸೈನಾರ್ ಅಮಾನಿ ಅಜ್ಜಾವರ ಅಬುದಾಬಿ ಮಾತನಾಡಿದರು.
ಅಥಾವುಲ್ಲಾ ಕಡಬ ಸೌದಿ, ರಝಾಕ್ ಬುಸ್ತಾನಿ ಅಬುದಾಬಿ,ಆಸಿಫ್ ಪರ್ಲಡ್ಕ ದಮ್ಮಾಮ್, ಪೈರೋಜ್ ಪರ್ಲಡ್ಕ ಜುಬೈಲ್, ಖ್ಯಾತ ಮೋಟಿವೇಟರ್ ರಫೀಕ್ ಸರ್,ಶರೀಅತ್ ಉಪ ಪ್ರಾಂಶುಪಾಲರಾದ ಜಲೀಲ್ ಸಖಾಫಿ, ಸುದ್ದಿ ವರದಿಗಾರರಾದ ಯೂಸುಫ್ ರೆಂಜಲಾಡಿ ,ಮರ್ಕಝ್ ಆಡಳಿತ ಸಮಿತಿಯ ಕೋಶಾದಿಕಾರಿ ಸಾಜ ಯೂಸುಫ್ ಗೌಸಿಯಾ, ಕೆಕ್ಕಪರಿಶೋದಕರಾದ ಅನ್ವರ್ ಹುಸೇನ್ ಗೂಡಿನ ಬಳಿ, ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ,ಯೂಸುಫ್ ಹಾಜಿ ಕೈಕಾರ,ಆಶಿಕುದ್ದೀನ್ ಅಖ್ತರ್,ಕರೀಂ ಹಾಜಿ ಕಾವೇರಿ,ಪದವಿ ವಿಭಾಗದ ಪ್ರಾಂಶುಪಾಲರಾದ ಮುಹಮ್ಮದ್ ಮನ್ಸೂರು ಕಡಬ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಿಂದ ಸ್ಮರಣಿಕೆ
ಪದವಿಪೂರ್ವ, ಪದವಿ ವಿಭಾಗದ ವಿದ್ಯಾರ್ಥಿನಿಯರ ಪರವಾಗಿ ರಚಿಸಿದ ಸ್ಮರಣಿಕೆಯನ್ನೂ ಇದೇ ವೇಳೆ ನೀಡಲಾಯಿತು.
ಭಾವುಕರಾಗಿ ಕಣ್ಣೀರು ಹಾಕಿದ ಝಕರಿಯ್ಯ ಹಾಜಿ
ಪದವಿ ಪೂರ್ವ ವಿಭಾಗದ ವಿದ್ಯಾರ್ಥಿನಿಯರಾದ ಹಫೀಝ, ಮುಫೀದ, ಸ್ವಪ್ನ, ಝಕಿಯ್ಯ ರವರು ತಯಾರಿಸಿ ಹಾಡಿದ ಕಷ್ಟ ಕಾಲದ ಅವರ ಜೀವನದ ವಿಚಾರಗಳ ಹಿನ್ನೋಟದ ಹಾಡನ್ನು ತದೇಕ ಚಿತ್ತದಿಂದ ಆಲಿಸಿ ಕಣ್ಣೀರು ಹಾಕಿದರು. ಬಳಿಕ ಮಾತನಾಡಿದಾಗ ಅದನ್ನು ಹೇಳಿ ಹಾಡಿದ ಹಾಗೂ ರಚನೆ ಮಾಡಿದ ವಿದ್ಯಾರ್ಥಿನಿಯರನ್ನು ಶ್ಲಾಘಿಸಿದರು.
ಡಾ. ನುರ್ಜಾನ್ ಗೆ ಸನ್ಮಾನ
ಬೆಳಗಾವಿಯ ವಿಶ್ವೇಶ್ವರಯ್ಯ ಯೂನಿವರ್ಸಿಟಿಯಿಂದ ಭೌತಶಾಸ್ತ್ರ ವಿಭಾಗದಲ್ಲಿ ಪಿ.ಎಚ್ ಡಿ ಡಾಕ್ಟರೇಟ್ ಪದವಿ ಪಡೆದ ಮರ್ಕಝ್ ಸಂಸ್ಥೆಯ ವಿಜ್ಞಾನ ಉಪನ್ಯಾಸಕಿ ನೂರ್ ಜಹಾನ್ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.



