Sunday, February 22, 2026
Google search engine

Homeರಾಜ್ಯಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮ

ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮ

ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ದ ಆಶ್ರಯದಲ್ಲಿ ಉರ್ವ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಸ್ತ್ರೀ ವಿಶಿಷ್ಟ ಪರಿಕಲ್ಪನೆಯ ಸಂಗೀತ ಕಾರ್ಯಕ್ರಮವನ್ನು ಬಸ್ತಿ ಕವಿತಾ ಶೆಣೈ, ವಿಭಾ ನಾಯಕ್, ಶ್ರೀಲತಾ ಫ್ರಭು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಗೀತ ಭಾರತಿ ಫೌಂಡೇಶನ್ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್ , ಉಪಾಧ್ಯಕ್ಷ ನರೇಂದ್ರ ಎಲ್ ನಾಯಕ್, ಕಾರ್ಯದರ್ಶಿ ಡಾ.ಉಷಾಪ್ರಭಾ ಎನ್ ನಾಯಕ್, ಟ್ರಸ್ಟಿ ರಮೇಶ್ ಕೆಜಿ, ಖಚಾಂಚಿ ಕರುಣಾಕರ ಬಳ್ಕೂರು, ಸದಸ್ಯೆ ಸೌಮ್ಯ ಕಾಮತ್ ಉಪಸ್ಥಿತರಿದ್ದರು. ವಿಭಾ ಹೆಗ್ಡೆ ಮತ್ತು ಶಿವಾನಿ ಮಿರಾಜ್ ಕರ್ ಇವರಿಂದ ಶಾಸ್ತ್ರೀಯ ಜುಗಲ್ ಬಂಧಿ ಖಾರ್ಯಕ್ರಮ ನಡೆಯಿತು. ಇವರಿಗೆ ಹಾರ್ಮೋನಿಯಂನಲ್ಲಿ ಮೇಧಾ ಭಟ್, ತಬ್ಲದಲ್ಲಿ ವಿಜೇತಾ ಹೆಗ್ಡೆ, ತಂಬೂರದಲ್ಲಿ ಪ್ರತೀಕ್ಷ ಪ್ರಭು, ಶ್ರಾವರಿ.ಎಸ್ ಸಾಥ್ ನೀಡಿದರು. ಉತ್ತರಾರ್ಧದಲ್ಲಿ ವಯೋಲಿನ್ ಟ್ರಯೋ ಕಾರ್ಯಕ್ರಮವನ್ನು ಸಂಗೀತಾ ಶಂಕರ್ ಮತ್ತು ನಂದಿನಿ ಶಂಕರ್, ರಾಗಿಣಿ ಶಂಕರ್ ನಡೆಸಿಕೊಟ್ಟರು. ಇವರಿಗೆ ತಬ್ಲದಲ್ಲಿ ಅನುರಾಧ ಪಾಲ್ ಸಾಥ್ ನೀಡಿದರು. ಈ ಕಾರ್ಯಕ್ರಮಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ , ಪ್ರವಾಸೋದ್ಯಮ ಇಲಾಖೆ, ಕೆನರಾ ಬ್ಯಾಂಕ್, ಡಾ ದಯಾನಂದ ಫೈ, ಕರ್ನಾಟಕ ಬ್ಯಾಂಕ್ , ಎಲ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ, ಮುದ್ರಾ ಪ್ರಿಂರ್ಟಸ್ ಸಹ ಪ್ರಾಯೋಜಕತ್ವವನ್ನು ನೀಡಿದ್ದಾರೆ.

  • ಮಂಗಳೂರಿನಿಂದ ಶಂಶೀರ್ ಬುಡೋಳಿ
RELATED ARTICLES
- Advertisment -
Google search engine

Most Popular