ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಹೊಡೆದಾಟ ನಡೆದಿದ್ದು, ಓರ್ವನಿಗೆ ಚೂರಿ ಇರಿತವಾಗಿರುವ ಘಟನೆ ನಡೆದಿದೆ.
ಇಸ್ಮಾಯಿಲ್ ಮೌಲಾಲಿ (30) ಎಂಬ ಕೈದಿಗೆ ಮಹ್ಮದ್ ಹುಸೇನ್ ಎಂಬಾತ ಚೂರಿ ಇರಿದಿದ್ದಾನೆ. ಚೂರಿ ಇರಿತಕ್ಕೊಳಗಾದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಫರಹತ್ತಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮುಂದೆ ನಾಯಿಯನ್ನು ಕರೆತಂದು ಮಲ ಮೂತ್ರ ಮಾಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ 60 ವರ್ಷದ ಮಹಿಳೆ ಮೇಲೆ ಪೊಲೀಸ್ ಪೇದೆಯೊಬ್ಬನ ಹೆಂಡತಿ ಹಾಗೂ ಆಕೆಯ ತಂಗಿ ಹಲ್ಲೆ ಮಾಡಿದಂತಹ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಪೊಲೀಸ್ ಪೇದೆ ಚಂದ್ರಕಾಂತ್ ಎಂಬಾತ ತನ್ನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಸುವರ್ಣ ಎಂಬುವವರ ಮನೆ ಮುಂದೆ ಬಂದಿದ್ದಾರೆ. ಈ ವೇಳೆ ತಮ್ಮ ಮನೆ ಮುಂದೆ ನಾಯಿಯನ್ನು ಮಲಮೂತ್ರ ವಿಸರ್ಜಿಸುವುದಕ್ಕೆ ಸುವರ್ಣ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸ್ ಪೇದೆ ತನ್ನ ಪತ್ನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದು, ಸುವರ್ಣ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.
ಹಲ್ಲೆಗೊಳಗಾದ ಮಹಿಳೆ ಸುವರ್ಣ ದೂರು ನೀಡಿದ್ದು,ತಮ್ಮ ಮನೆ ಮುಂದೆ ನಾಯಿಯನ್ನು ಕರೆತಂದ ಚಂದ್ರಕಾಂತ್ ಅಲ್ಲಿ ಅದು ಮೂತ್ರ ವಿಸರ್ಜನೆ ಮಾಡಿದಾಗ ಆಕ್ಷೇಪವೆತ್ತಿದ್ದಾರೆ. ಈ ವೇಳೆ ಆತ ತನ್ನ ಪತ್ನಿ ಹಾಗೂ ಆಕೆಯ ತಂಗಿಯನ್ನು ಕರೆ ಮಾಡಿ ಕರೆಸಿ ಸುವರ್ಣ ಅವರ ಮೇಲೆ ಥಳಿಸುವಂತೆ ಪ್ರೇರಣೆ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಅವರು ಸುವರ್ಣ ಅವರಿಗೆ ಥಳಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಮಹಿಳೆಯೊಬ್ಬಳು ಸುವರ್ಣ ಅವರ ಕೆನ್ನೆಗೆ ಬಾರಿಸಿರುವುದು ಗೊತ್ತಾಗಿದೆ. ಇದಿಷ್ಟೇ ಅಲ್ಲ ಕಾನ್ಸ್ಟೇಬಲ್ ಕೈಯಲ್ಲಿದ್ದ ಕೋಲನ್ನು ಕಿತ್ತುಕೊಂಡು ವೃದ್ಧ ಮಹಿಳೆಗೆ ಥಳಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಅಲ್ಲೇ ಇದ್ದ ಸ್ಥಳೀಯರು ಜಗಳ ಬಿಡಿಸುವ ಬದಲು ನೋಡುತ್ತಾ ನಿಂತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಇನ್ಸ್‌ಪೆಕ್ಟರ್ ಪಿ ಆಂಜನೇಯ ಹೇಳಿದ್ದಾರೆ.