ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಜೈಲಲ್ಲಿ ಹೊಡೆದಾಟ ನಡೆದ ಘಟನೆ ನಡೆದಿದೆ. ನಿನ್ನೆ ಜಿಲ್ಲಾ ಜೈಲಿನ ಕ್ವಾರಂಟೈನ್ ಸೆಲ್ ವಿಭಾಗದಲ್ಲಿರುವ ಕೆಲವು ವಿಚಾರಣಾಧೀನ ಕೈದಿಗಳು ತನ್ನ ಕಚೇರಿಯ ಮುಂಭಾಗ ನಿಂತು ಬಿ ಬ್ಯಾರಕ್‌ನಲ್ಲಿರುವ ಕೆಲವು ವಿಚಾರಣಾ ಕೈದಿಗಳನ್ನು ಗುರಾಯಿಸಿ ನೋಡಿದರು ಎಂಬ ಕಾರಣಕ್ಕೆ ಪರಸ್ಪರ ಅವಾಚ್ಯ ಶಬ್ದದಿಂದ ಬೈದಾಡಿಕೊಂಡಿದ್ದಾರೆ. ಅಲ್ಲದೆ ಸಿಮೆಂಟ್ ಬ್ಲಾಕ್‌ಗಳನ್ನು ಹೊಡೆದು ಅದರ ತುಂಡುಗಳನ್ನು ಎಸೆದಿದ್ದಾರೆ.
ಬಿ ಬ್ಯಾರಕ್‌ನ ಮಧ್ಯದ್ವಾರದ ಗೇಟನ್ನು ದೂಡಿ ಹೊರಬಂದು ಕಚೇರಿಯ ಕೋಣೆಗೆ ನುಗ್ಗಿ ಬಾಗಿಲಿನ ಗ್ಲಾಸನ್ನು ಕೈಯಿಂದ ಹೊಡೆದು ಹಾನಿ ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ಒಬ್ಬ ಕೈದಿಯ ಕಾಲಿಗೆ ಗಾಯವಾಗಿದೆ ಎಂದು ಕಾರಾಗೃಹದ ಅಧೀಕ್ಷಕರು ನೀಡಿದ ದೂರಿನಂತೆ ಮಂಗಳೂರು ನಗರದ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.