ಮೈಸೂರು: ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕುರಿತು ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಪೊಲೀಸರು ದಾಖಲಿಸಿರುವುದು ಹಿಂದೂಗಳ ಟಾರ್ಗೆಟ್ ಅಲ್ಲ. ನಾನು ಕೂಡ ಹಿಂದೂ ನನ್ನ ಹೆಸರಿನಲ್ಲೇ ಎರಡು ದೇವರು ಇವೆ. ಸಿದ್ದ ಎಂದರೆ ಈಶ್ವರ ರಾಮ ಎಂದರೆ ವಿಷ್ಣು. ಪ್ರಚೊಧನಕಾರಿ ಭಾಷಣ ಮಾಡಿದವರನ್ನು ಸುಮ್ಮನೆ ಬಿಡಲಾಗುತ್ತದಾ? ಸಮಾಜದ ಶಾಂತಿಗೆ ಭಂಗ ತಂದವರ ವಿರುದ್ಧ ಕ್ರಮ ಕೈಗೊಳ್ಳುವುದು ತಪ್ಪಲ್ಲ. ಪೊಲೀಸರು ನಿಯಮದ ಪ್ರಕಾರ ಅವರ ಮೇಲೆ ಕೇಸ್ ಹಾಕಿದ್ದಾರೆ ಇದರಲ್ಲಿ ರಾಜಕೀಯ ಎಲ್ಲಿದೆ ಹಿಂದುಗಳ ಟಾರ್ಗೆಟ್ ಅಂದರೆ ಹೇಗೆ ಎಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಇನ್ನು ಹಾಸನದಲ್ಲಿ ಗಣಪತಿ ಮೆರವಣಿಗೆ ವೇಳೆ ಕ್ಯಾಂಟರ್ ಹರಿದು 9 ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತರಿಗೆ ಸಂತಾಪ ಸೂಚಿಸಿ ಕುಟುಂಬಸ್ಥರಿಗೆ ಸಿಎಂ ಸಿದ್ದರಾಮಯ್ಯ ಸಾಂತ್ವನವನ್ನು ಹೇಳಿದ್ದಾರೆ. ವಾಹನಗಳ ಚಾಲಕರ ನಿರ್ಲಕ್ಷದಿಂದ ಅಪಘಾತಗಳು ಸಂಭವಿಸಿದರೆ ಅದಕ್ಕೆ ಸರ್ಕಾರ ಹೇಗೆ ಹೊಣೆಗಾರಿಕೆ ಆಗುತ್ತದೆ? ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಘಟನೆ ಭೇಟಿ ನೀಡಿದ್ದಾರೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಘಟನೆಗೆ 5 ಲಕ್ಷ ಪರಿಹಾರ ಘೋಷಿಸಿದ್ದೇವೆ ಎಂದು ತಿಳಿಸಿದರು.