ನವದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ೧೧.೩೦ ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿಶಾಮಕ ಇಲಾಖೆಯ ವರದಿಯ ಪ್ರಕಾರ, ರಾತ್ರಿ 11:32ರ ಸಮಯದಲ್ಲಿ ಬೆಂಕಿಯ ಬಗ್ಗೆ ಕರೆ ಬಂದಿದೆ. ಎಂಟು ಅಗ್ನಿಶಾಮಕ ವಾಹನಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಾರ್ಯಚರಣೆ ನಡೆಸಿದವು. ಸ್ಥಳೀಯರು ನೀಡಿದ ಮಾಹಿತಿಯಂತೆ, ಬೆಂಕಿ ತೀವ್ರವಾಗಿದ್ದು ಕಟ್ಟಡದ ಒಳಗಡೆ ಇದ್ದ ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು.
ಇ-ರಿಕ್ಷಾ ಚಾರ್ಜಿಂಗ್ನಿಂದ ಬೆಂಕಿಗೆ ಕಾರಣ?
ಪ್ರಾಥಮಿಕ ತನಿಖೆ ಪ್ರಕಾರ, ಕಟ್ಟಡದ ಒಳಭಾಗದಲ್ಲಿ ಇ-ರಿಕ್ಷಾಗಳನ್ನು ಚಾರ್ಜ್ ಮಾಡುತ್ತಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಈ ದುರ್ಘಟನೆಗೆ ನಿಖರ ಕಾರಣ ಏನೆಂಬುದನ್ನು ಸ್ಪಷ್ಟಗೊಳಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆಂಕಿಯಲ್ಲಿ ಎರಡು ಇ-ರಿಕ್ಷಾಗಳ ಜೊತೆಗೆ ಹಲವಾರು ಮೋಟಾರ್ ಸೈಕಲ್ಗಳು ಸಂಪೂರ್ಣವಾಗಿ ನಾಶವಾಗಿವೆ. ಮೃತರ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲವಾದರೂ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ದೃಢವಾಗಿದೆ. ಮೃತರು ಕಟ್ಟಡದೊಳಗಿದ್ದವರೇ ಎಂಬ ಅನುಮಾನ ವ್ಯಕ್ತವಾಗಿದೆ.
ಅಗ್ನಿಶಾಮಕ ದಳದ ಸಮಯೋಚಿತ ಚಟುವಟಿಕೆಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಸ್ಥಳೀಯರು ಕೂಡ ಬೇಗನೆ ಮಾಹಿತಿ ನೀಡಿದ್ದು, ಇದರಿಂದ ಬೆಂಕಿಯ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿತ್ತು. ಕಟ್ಟಡವು ಬಹುಮಹಡಿ ಇರುವುದರಿಂದ ಬೆಂಕಿ ಬೇಗ ಹರಡಿದರೂ ಕೂಡ, ಇತರ ಭಾಗಗಳಿಗೆ ತಡೆಯುವಲ್ಲಿ ಯಶಸ್ಸು ದೊರೆತಿದೆ.
ಈ ಘಟನೆಯು ಇ-ರಿಕ್ಷಾ ಮತ್ತು ಇತರ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುವ ಸಂದರ್ಭದ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರವಾದ ಪ್ರಶ್ನೆ ಎಬ್ಬಿಸಿದೆ. ಸಾರ್ವಜನಿಕರು ಇಂತಹ ವಾಹನಗಳನ್ನು ರಹದಾರಿ ಪ್ರದೇಶ ಅಥವಾ ಪೂರಕ ಸೌಲಭ್ಯಗಳಿಲ್ಲದ ಸ್ಥಳಗಳಲ್ಲಿ ಚಾರ್ಜ್ ಮಾಡುತ್ತಿರುವುದು ಅಪಾಯವನ್ನು ಆಹ್ವಾನಿಸುವಂತಾಗಿದೆ.
ಸ್ಥಳೀಯ ಪೊಲೀಸ್ ಮತ್ತು ಅಗ್ನಿಶಾಮಕ ಅಧಿಕಾರಿಗಳು ಸ್ಥಳದ ಪರಿಶೀಲನೆ ನಡೆಸಿ, ಸಾಕ್ಷ್ಯ ಸಂಗ್ರಹಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕರಿಗೂ, ವಾಹನ ಮಾಲೀಕರಿಗೂ ಸುರಕ್ಷತೆಗಾಗಿ ಸರಿಯಾದ ವ್ಯವಸ್ಥೆಗಳ ಅನುಷ್ಠಾನ ಮಾಡುವ ಅಗತ್ಯವಿದೆ ಎಂಬ ಸಂದೇಶ ನೀಡಿದೆ.