Sunday, March 1, 2026
Google search engine

Homeರಾಜ್ಯಈಶ್ವರಮಂಗಲ ಸಮೀಪದ ಶರವು-ಕೊಂಕಣಗುಂಡಿಯಲ್ಲಿ ಗುಡ್ಡಕ್ಕೆ ಬೆಂಕಿ

ಈಶ್ವರಮಂಗಲ ಸಮೀಪದ ಶರವು-ಕೊಂಕಣಗುಂಡಿಯಲ್ಲಿ ಗುಡ್ಡಕ್ಕೆ ಬೆಂಕಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಬಿದ್ದು ಗುಡ್ಡ ಹೊತ್ತಿ ಉರಿದ ಘಟನೆ ಈಶ್ವರಮಂಗಲ ಸಮೀಪದ ಶರವು-ಕೊಂಕಣಗುಂಡಿಯಲ್ಲಿ ಮಾ.1ರಂದು ಮಧ್ಯಾಹ್ನ ನಡೆದಿದೆ.
ರವಿ ಕನ್ನಾಯ ಎಂಬವರಿಗೆ ಸೇರಿದ ಗುಡ್ಡಕ್ಕೆ ಮಾ.1ರಂದು ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಬಿದ್ದಿದ್ದು, ಗುಡ್ಡದ ತುಂಬೆಲ್ಲಾ ಬೆಂಕಿ ಆವರಿಸಿತ್ತು. ಕೂಡಲೇ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿ ಬಳಿಕ ಅಗ್ನಿಶಾಮಕದಳದ ಲೀಲಾಧರ್ ಹಾಗೂ ಸಿಬ್ಬಂದಿಗಳು ಮತ್ತು ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಲಾಯಿತು ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular