ಚಿಕ್ಕಮಗಳೂರು : ಒಂದೆಡೆ ಕೈಕೊಟ್ಟ ಮಳೆಯಿಂದಾಗಿ ರೈತರು ಕಂಗಾಲಾಗಿರುವ ಬೆನ್ನಲ್ಲೆ ಜಮೀನಿನಲ್ಲಿ ಬಿತ್ತನೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿಗಳು ಅಡ್ಡಿ ಪಡಿಸಿರುವ ಘಟನೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿತ್ತನೆ ಮಾಡಲು ಹೋದ ರೈತರಿಗೆ ಅರಣ್ಯ ಅಧಿಕಾರಿಗಳು ಕಿರಿ-ಕಿರಿ ಮಾಡಿದ್ದು, ಹಲವು ವರ್ಷದಿಂದ ಉಳುಮೆ ಮಾಡುತ್ತಿದ್ದರೂ ಕೂಡ ಅರಣ್ಯ ಭೂಮಿ ಎಂದು ಹೇಳಿ ಹೊಲದಲ್ಲಿ ಬಿತ್ತನೆ ಮಾಡದಂತೆ ತಡೆದ ಅರಣ್ಯ ಇಲಾಖೆಯ ಸಿಬ್ಬಂದಿಗಳ ತಡೆಯೊಡ್ಡಿದ್ದಾರೆ.
ತರೀಕೆರೆ ಅರಣ್ಯ ವಲಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ತೀರ್ಪು ಬರುವ ಮುನ್ನವೇ ಹೊಲ ಬಿಡುವಂತೆ ಅಧಿಕಾರಿಗಳ ಸೂಚನೆ ನೀಡಿದ್ದಾರೆ.