ಮಂಡ್ಯ: ಮಾಜಿ ಸಿಎಂ ಯಡಿಯೂರಪ್ಪಗೆ ಕಾನೂನು ಸಂಕಷ್ಟ ಹಿನ್ನಲೆ ಹೆಚ್ ಡಿ ಕುಮಾರಸ್ವಾಮಿ ಕೃತಜ್ಞತಾ ಸಮಾವೇಶವನ್ನು ಜೆಡಿಎಸ್ ನಾಯಕರು ಮುಂದೂಡಿದ್ದಾರೆ.
ಜೂನ್ 16ರ ಸಂಜೆ 5 ಗಂಟೆಗೆ ಮಂಡ್ಯದ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಹೆಚ್ಡಿಕೆ ಕೃತಜ್ಞತಾ ಸಮಾವೇಶವನ್ನು ಮುಂದೂಡಲಾಗಿದೆ.
ನೆನ್ನೆಯಷ್ಟೆ ಕಾರ್ಯಕ್ರಮದ ಬಗ್ಗೆ ಮಂಡ್ಯದಲ್ಲಿ ಜೆಡಿಎಸ್ ನಾಯಕರ ಸುದ್ದಿಗೋಷ್ಠಿ ನಡೆಸಿದ್ದರು. ಹೆಚ್ಡಿಕೆ ಕೃತಜ್ಞತಾ ಸಮಾವೇಶಕ್ಕೆ ಯಡಿಯೂರಪ್ಪರನ್ನು ದಳಪತಿಗಳು ಆಹ್ವಾನಿಸಿದ್ದರು. ಇದೀಗ ಮಾಜಿ ಸಿಎಂ ಯಡಿಯೂರಪ್ಪಗೆ ಕಾನೂನು ಸಂಕಷ್ಟ ಹಿನ್ನಲೆ ಕಾರ್ಯಕ್ರಮ ಮುಂದೂಡಲಾಗಿದೆ.
ಬೃಹತ್ ಕೃತಜ್ಞತಾ ಸಮಾವೇಶ ಮುಂದೂಡಿ ಸರಳವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.
ನಾಳೆ ಮಂಡ್ಯಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಗಮಿಸಲಿದ್ದು,
ತಮ್ಮ ನಾಯಕರನ್ನ ಸ್ವಾಗತಿಸಲು ಜೆಡಿಎಸ್ ನಾಯಕರು ಸಿದ್ದತೆ ಮಾಡಿಕೊಂಡಿದ್ದು, ಜಿಲ್ಲಾ ಗಡಿ ಭಾಗ ಮದ್ದೂರಿನ ನಿಡಘಟ್ಟ ಬಳಿ ಹೆಚ್ಡಿಕೆಗೆ ಸ್ವಾಗತ ಕೋರಲಿದ್ದಾರೆ.
ಬಳಿಕ ಮಂಡ್ಯದ ಹನಕೆರೆಯಿಂದ ನೂತನ ಕೇಂದ್ರ ಸಚಿವರನ್ನ ವೆಲ್ ಕಮ್ ಮಾಡಿ ನಂತರ ಸಂಜಯ್ ವೃತ್ತದಿಂದ ಡಿಸಿ ಕಚೇರಿ ರೆಗೆ ತೆರದ ವಾಹನದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಗುತ್ತಿದೆ.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನೂತನ ಸಂಸದರ ಕಚೇರಿಯನ್ನು ಹೆಚ್ ಡಿಕೆ ಉದ್ಘಾಟಿಸಲಿದ್ದಾರೆ. ನಂತರ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬಳಿಕ ಸಾರ್ವಜನಿಕ ಆಹ್ವಾಲು ಸ್ವೀಕರಿಸಲಿದ್ದಾರೆ ಎಂದು ಮಂಡ್ಯದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾಹಿತಿ ನೀಡಿದ್ದಾರೆ.