ಬಾಗಲಕೋಟೆ: ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ತಾಯಿ ಭೀಮಾಬಾಯಿ ಲಿಂಬಾವಳಿ (84) ಇಂದು ಬೆಳಗ್ಗೆ ಬಾಗಲಕೋಟೆಯ ದೀಪಂ ಕಾಲೋನಿಯಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ. ಇಂದು ಬೆಳಗ್ಗೆ 4 ಗಂಟೆಗೆ ಅವರು ಕೊನೆಯುಸಿರೆಳೆದಿದ್ದು, ಸಂಜೆ ತುಳಸಿಗೇರಿಯ ಹೊಲದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು.
ಮೃತರಿಗೆ ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ತಮ್ಮ ತಾಯಿಯ ಬಗ್ಗೆ ಎಕ್ಸ್ನಲ್ಲಿ (ಹಳೆಯ ಟ್ವಿಟರ್) ಶೋಕಭರಿತ ಸಂದೇಶವನ್ನು ಹಂಚಿಕೊಂಡಿರುವ ಲಿಂಬಾವಳಿ, “ತಾಯಿಯ ಪ್ರೀತಿ, ಮಮತೆ ಮತ್ತು ಆಶೀರ್ವಾದ ನಮ್ಮ ಹೃದಯದಲ್ಲಿ ಸದಾ ಹಸಿರಾಗಿರುತ್ತದೆ. ಅವರು ಕಲಿಸಿದ ಸರಳತೆ ಹಾಗೂ ನೀತಿ ಪಾಠಗಳು ನನ್ನ ಬದುಕಿಗೆ ಸದಾ ಪ್ರೇರಣೆಯಾಗಿ ಉಳಿಯುತ್ತವೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ” ಎಂದು ಸಂತಾಪ ಸೂಚಿಸಿದ್ದಾರೆ.