Thursday, July 17, 2025
Google search engine

Homeರಾಜ್ಯಸುದ್ದಿಜಾಲ51 ಮಠಾಧೀಶರ ಸಾನ್ನಿಧ್ಯದಲ್ಲಿ ವಿಶೇಷ ಜನ್ಮದಿನ ಆಚರಿಸಿದ ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್. ವಿಜಯ್

51 ಮಠಾಧೀಶರ ಸಾನ್ನಿಧ್ಯದಲ್ಲಿ ವಿಶೇಷ ಜನ್ಮದಿನ ಆಚರಿಸಿದ ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್. ವಿಜಯ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಅವರು 51ನೇ ವರ್ಷದ ಜನ್ಮದಿನಾಚರಣೆಯನ್ನು ವಿಶೇಷ ಮತ್ತು ವಿನೂತನವಾಗಿ ಆಚರಿಸಿಕೊಂಡರು. ಸಾಲಿಗ್ರಾಮ ತಾಲೂಕಿನ ಹರದನಹಳ್ಳಿಯಲ್ಲಿ ನಡೆದ ಜನ್ಮ ದಿನಾಚರಣೆಯಲ್ಲಿ 51 ಮಂದಿ ಮಠಾಧೀಶ ದಿವ್ಯ ಸಾನಿದ್ಯದಲ್ಲಿ ವಿವಿಧ ಸಮಾಜ ಸೇವಾ ಕಾರ್ಯಗಳೊಂದಿಗೆ ಆಚರಿಸಿಕೊಂಡ ಮುಡಾ ಮಾಜಿ ಅಧ್ಯಕ್ಷರು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ
ಎಸ್ಎಸ್ ಎಲ್ ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ‌ ಗೌರವಿಸಿದರಲ್ಲದೆ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷವಾಗಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ
51 ಗರ್ಭಿಣಿ ಸ್ತ್ರೀಯರಿಗೆ ಫಲತಾಂಬೂಲ ಮತ್ತು ಭಾಗಿನ ನೀಡಿ ದಂಪತಿ ಸಮೇತ ಸೀಮಂತ ಕಾರ್ಯ ಮಾಡಿದ್ದು ವಿಶೇಷವಾಯಿತು.

ಹೆಚ್.ಎನ್.ವಿಜಯ್ ಅವರ ಜನ್ಮ ದಿನಾಚರಣೆ ಅಂಗವಾಗಿ ಇಡೀ ಹರದನಹಳ್ಳಿ ಗ್ರಾಮ ಹಬ್ಬದ ಸಂಭ್ರಮದಿಂದ ಕೂಡಿತ್ತಲ್ಲದೆ ಜೆಡಿಎಸ್.ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳ ವಿವಿಧ ಜನಪ್ರತಿನಿಧಿಗಳು ಅಲ್ಲದೇ ಸಾವಿರಾರು ಮಂದಿ ವಿಜಯ್ ಅವರಿಗೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಮತ್ತು‌ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್‌ ಮಾತನಾಡಿ ಹೆಚ್.ಎನ್.ವಿಜಯ್ ಅವರು ಸಾಮಾಜಿಕ ಕಳಕಳಿ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ ವಿಜಯ್ ಅವರಿಗೆ ಮುಂದಿನಗಳಲ್ಲಿ ಉನ್ನತ ರಾಜಕೀಯ ಸ್ಥಾನಮಾನ ದೊರಕಲಿ ಎಂದು ಹಾರೈಸಿದರು.

ಶುಭಕೋರಿದ ಗಣ್ಯರು : ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್‌ವಿಜಯ್ ಅವರ ಜನ್ಮ ದಿನಾಚರಣೆಗೆ ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕರಾದ ಜಿ.ಟಿ.ದೇವೇಗೌಡ, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಕೆ.ವಿವೇಕಾನಂದ, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮೈಮಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಜೆಡಿಎಸ್ ಮುಖಂಡ ಎಸ್.ಟಿ.ಕೀರ್ತಿ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೊಸೂರು ಕುಚೇಲ್, ಪತ್ರಕರ್ತ ಕೆ.ಟಿ.ಮೋಹನ್ ಸೇರಿದಂತೆ ವಿವಿಧ ಜಿಲ್ಲೆಗಳ ರಾಜಕೀಯ ಮುಖಂಡರು ಮತ್ತು ಹೆಚ್.ಎನ್.ವಿಜಯ್ ಅವರ ಅಭಿಮಾನಿಗಳು ಶುಭಕೋರಿದರು.

ಮನಸೋರೆಗೊಂಡ ರಸಮಂಜರಿ ಕಾರ್ಯಕ್ರಮ: ಜನ್ಮ ದಿನಾಚರಣೆ ಅಂಗವಾಗಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಅನುಶ್ರಿ ತಂಡದವರಿಂದ ನಡೆಸಿಕೊಟ್ಟ ಸಂಗೀತ ರಸಮಂಜರಿ ಕಾರ್ಯಕ್ರಮ ವಿಜಯ್ ಅವರಿಗೆ ಶುಭಕೋರಲು ಬಂದ ಸಾರ್ವಜನಿಕರಿಗೆ ಮನರಂಜನೆ ನೀಡಿತ್ತಲ್ಲದೆ ಬೆಂಗಾಲಿ ಬೆಡಗಿಯರ ನೃತ್ಯಕ್ಕೆ ಹರದನಹಳ್ಳಿ ಗ್ರಾಮಸ್ಥರು ಮನಸೋರೆಗೊಂಡರು.

ಎಲ್ಲೆಂದರಲ್ಲಿ ರಾರಾಜಿಸಿದ ಪ್ಲೇಕ್ಸ್: ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊನೆ ಭಾಗ ಹನೂರು‌ ತಾಲೂಕಿನಿಂದ ಪ್ರಾರಂಭವಾಗಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ವರೆಗೆ ಪ್ಲೆಕ್ಸ್ ಭರಾಟೆ ಜೋರಾಗಿತ್ತು

RELATED ARTICLES
- Advertisment -
Google search engine

Most Popular