Monday, May 26, 2025
Google search engine

Homeರಾಜ್ಯಸರ್ಕಾರಿ ಶಾಲೆಗಳಿಗೆ ನವೆಂಬರ್ ನಿಂದ ಉಚಿತ ವಿದ್ಯುತ್, ನೀರು ಪೂರೈಕೆ: ಮಧು ಬಂಗಾರಪ್ಪ ಘೋಷಣೆ

ಸರ್ಕಾರಿ ಶಾಲೆಗಳಿಗೆ ನವೆಂಬರ್ ನಿಂದ ಉಚಿತ ವಿದ್ಯುತ್, ನೀರು ಪೂರೈಕೆ: ಮಧು ಬಂಗಾರಪ್ಪ ಘೋಷಣೆ

ಮೈಸೂರು: ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರನ್ನು ನವೆಂಬರ್ ​ನಿಂದ ಪೂರೈಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಇದರಿಂದ ಶಾಲೆಗಳಲ್ಲಿ ಮುಕ್ತವಾಗಿ ಎಲ್ಲಾ ವ್ಯವಸ್ಥೆ ಬಳಸಿಕೊಳ್ಳಬಹುದು. ಎಷ್ಟೋ ಶಾಲೆಗಳಿಗೆ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಉಚಿತವಾಗಿ ವಿದ್ಯುತ್​ ಹಾಗೂ ನೀರು ನೀಡಿದರೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಅನುಕೂಲವಾಗಲಿದೆ. ಎಷ್ಟೋ ಶಾಲೆಗಳು ವಿದ್ಯುತ್ ಬಿಲ್‌ಗೆ ಹೆದರಿ ಕಂಪ್ಯೂಟರ್ ಬಳಸುತ್ತಿಲ್ಲ. ಇದೀಗ ಇದೆಲ್ಲಕ್ಕೂ ಸಹಾಯವಾಗಲಿದೆ. ಇನ್ನು ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಹಾಲಿನಲ್ಲಿ ರಾಗಿ ಮಾಲ್ಟ್ ಕೊಡುತ್ತೇವೆ. ಕ್ಷೀರ ಭಾಗ್ಯ ಹಾಲಿನಲ್ಲಿ ರಾಗಿ ಮಾಲ್ಟ್ ಹಾಕಿ ಮೈಸೂರಿನ ಸಿಎಫ್‌ ಟಿಆರ್‌  ಐನಲ್ಲಿ ಟೆಸ್ಟ್ ಮಾಡಿಸುತ್ತಿದ್ದೇವೆ. ಮಕ್ಕಳ ಪೌಷ್ಟಿಕಾಂಶ ಜಾಸ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ನನ್ನ ಇಲಾಖೆ ತುಂಬಾ ದೊಡ್ಡದು. ಮುಖ್ಯಮಂತ್ರಿಗಳು ನನಗೆ ಬೇರೆ ಖಾತೆ ನಿಗದಿ ಮಾಡಿದ್ದರು. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನಗೆ ಟಫ್ ಇಲಾಖೆ ಕೊಡಿ ಅಂತ ಹೇಳಿದರು. ಇದಕ್ಕೆ ರಣದೀಪ್​ ಸಿಂಗ್​ ಸುರ್ಜೇವಾಲ ಅವರೂ ಒಪ್ಪಿದರು. ಡಿಕೆ ಶಿವಕುಮಾರ್​ ಅವರು ನಮ್ಮ ತಂದೆಯವರಿಗೆ ಆತ್ಮೀಯರು. ನನ್ನ ಇಲಾಖೆ ಸವಾಲಿನ ಇಲಾಖೆ, ಸಮಸ್ಯೆಗಳೂ ಇವೆ ಎಂದರು.

ರಾಜ್ಯದಲ್ಲಿ ಸರ್ಕಾರಿ ಶಾಲೆಗಳೇ 58,000 ಶಾಲೆಗಳಿವೆ. ಒಟ್ಟು 1.20 ಕೋಟಿ ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಣದಲ್ಲಿ ಅವಕಾಶ ಬಹಳ ಮುಖ್ಯ. ಮೂರು ಪರೀಕ್ಷೆಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದ ದ್ವಿತೀಯ ಪಿಯುಸಿಯಲ್ಲಿ ಮೂರನೇ ಪರೀಕ್ಷೆಗೆ 1.20 ಲಕ್ಷ ವಿದ್ಯಾರ್ಥಿಗಳು ಹಾಜರಾದರು. ಈ ಪೈಕಿ 42,000 ವಿದ್ಯಾರ್ಥಿಗಳು ಪಾಸಾದರು. ಎಸ್‌ಎಸ್‌ಎಲ್‌‌ಸಿಗೂ ಇದೇ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಮಾರ್ಕ್ಸ್ ಕಾರ್ಡ್‌ನಲ್ಲಿ ಸಪ್ಲಿಮೆಂಟರಿ ಅನ್ನುವ ಪದ ಬಳಕೆ ನಿಷೇಧಿಸಿದ್ದೇವೆ ಎಂದು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular