ಚಾಮರಾಜನಗರ : ನಗರದ ನಂದಿ ಭವನದಲ್ಲಿ ಲಯನ್ ಸಂಸ್ಥೆ ಹಾಗೂ ಅರವಿಂದ ಕಣ್ಣಿನ ಆಸ್ಪತ್ರೆ ಕೊಯಮತ್ತೂರು ಸಹಯೋಗದಲ್ಲಿ ಮಂಗಳವಾರ ಬೃಹತ್ ನೇತ್ರ ತಪಾಸಣಾ ಶಿಬಿರದ ಉದ್ಘಾಟನೆಯನ್ನು ವೃತ್ತ ನಿರೀಕ್ಷಕ ಆನಂದ್ ಕುಮಾರ್ ಅವರು ನೆರವೇರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಜೈನ್ ಮಾತನಾಡಿ, ನಮ್ಮ ಲಯನ್ ಸಂಸ್ಥೆಯು ಉಚಿತ ಕಣ್ಣಿನ ತಪಾಸಣಾ ಶಿಬಿರದಂತಹ ಅನೇಕ ಕಾರ್ಯಕ್ರಮಗಳನ್ನು ನೆರವೇರಿಸಿದ್ದು ಇದರ ಸದುಪಯೋಗವು ಎಲ್ಲರಿಗೂ ದೊರೆತಿರುತ್ತದೆ ಆದ್ದರಿಂದ ಪ್ರತಿ ತಿಂಗಳು ನಡೆಯುವ ಇಂದು ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಸುಮಾರು ೫೦೦ಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದು ಅದರಲ್ಲಿ ೨೨೦ ಜನರು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ೪೦ ಜನರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗಿರುತ್ತದೆ ಎಂದರು.
ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ ಮಾತನಾಡಿ,ಈ ಶಿಬಿರವನ್ನು ಏರ್ಪಡಿಸಿರುವ ಉದ್ದೇಶವೇನೆಂದರೆ ಎಲ್ಲಾ ಬಡ ಜನರಿಗೆ ಅನುಕೂಲವಾಗಬೇಕು. ಕಣ್ಣಿಲ್ಲದವರಿಗೆ ಕಣ್ಣು ನೀಡುವುದು ಅಂದರೆ ಹಸಿವಿದ್ದ ವರಿಗೆ ಹಸಿವು ನೀಗಿಸುವಂತಹ ಸಮಾಜಮುಖಿ ಕೆಲಸಗಳನ್ನು ನಮ್ಮ ಸಂಸ್ಥೆ ಮಾಡುತ್ತಾ ಬಂದಿದೆ ಈ ಶಿಬಿರವನ್ನು ಪ್ರತಿ ತಿಂಗಳು ನಮ್ಮ ಸಂಸ್ಥೆವತಿಯಿಂದ ನಡೆಸುತ್ತಾ ಬಂದಿದ್ದೇವೆ ಆದರೆ ಈ ಬಾರಿ ವಿಶೇಷತೆ ಏನೆಂದರೆ ೫೦೦ಕ್ಕೂ ಹೆಚ್ಚು ಜನರು ಬಂದಿದ್ದಾರೆ ಇದರಲ್ಲಿ ನೂರರಿಂದ ೧೨೫ ಜನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗುವ ಸಾಧ್ಯತೆ ಇದೆ ಆಯ್ಕೆಯಾದ ಎಲ್ಲರನ್ನು ಇದೇ ದಿನ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಗುತ್ತದೆ ನಂತರ ಶಸ್ತ್ರ ಚಿಕಿತ್ಸೆ ಮಾಡಿ ಅದೇ ಬಸ್ಸಲ್ಲಿ ತಮ್ಮ ಊರುಗಳಿಗೆ ಕಳುಹಿಸಲಾಗುತ್ತದೆ ಎಂದರು.
ಈ ಶಿಬಿರದಲ್ಲಿ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಹೊಸೂರು ಜಗದೀಶ್, ಖಜಾಂಚಿ ಲೋಕೇಶ್ ಕುಮಾರ್ ಜೈನ್,ಸದಸ್ಯರಾದ ಚೇತನ್ ಕುಮಾರ್ ,ಪ್ರಕಾಶ್ ಕುಮಾರ್ ವೈ.ಪಿ.ರಾಜೇಂದ್ರ,ಅರವಿಂದ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಚಿನ್ಮಯಿ ಮಹಾತ್ಮ, ಡಾಕ್ಟರ್ ನವೀನ್ ರಂಜಿತ್, ಸಿಪಿಓ ವಿಜಯಕುಮಾರ್, ನಂದಿ ಭವನದ ಮಾಲೀಕ ದಿನೇಶ್ ಕುಮಾರ್ ಇದ್ದರು.