Wednesday, June 24, 2026
Google search engine

Homeಸ್ಥಳೀಯಬಿಎಸ್‌ಎನ್‌ಎಲ್‌ನಿಂದ ಹಳ್ಳಿಗಳಿಗೆ ಉಚಿತ FTTH ಸಂಪರ್ಕ : ರೂ.259ಕ್ಕೆ ವೇಗದ ಇಂಟರ್ನೆಟ್, ಕರೆಗಳ ಸೌಲಭ್ಯ

ಬಿಎಸ್‌ಎನ್‌ಎಲ್‌ನಿಂದ ಹಳ್ಳಿಗಳಿಗೆ ಉಚಿತ FTTH ಸಂಪರ್ಕ : ರೂ.259ಕ್ಕೆ ವೇಗದ ಇಂಟರ್ನೆಟ್, ಕರೆಗಳ ಸೌಲಭ್ಯ

ಮೈಸೂರು : ಗ್ರಾಮೀಣ ಭಾಗದ ಸಬಲೀಕರಣಕ್ಕಾಗಿ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ ‘ಡಿಜಿಟಲ್ ಭಾರತ್ ನಿಧಿ’ (DBN) ಯೋಜನೆಯಡಿ, ಬಿಎಸ್‌ಎನ್‌ಎಲ್ ಮೈಸೂರು ವಲಯವು ಹಳ್ಳಿಗಳಲ್ಲಿ ಉಚಿತ ಎಫ್‌ಟಿಟಿಎಚ್ (Free FTTH/Fiber) ಇಂಟರ್ನೆಟ್ ಅಳವಡಿಕೆ ಹಾಗೂ ಗ್ರಾಮೀಣ ಸ್ವಯಂ ಉದ್ಯೋಗ ಅಭಿಯಾನವನ್ನು ಹಮ್ಮಿಕೊಂಡಿದೆ.

ಭಾರತನೆಟ್ ಯೋಜನೆಯಡಿ ವೈಫೈ ರೌಟರ್ (CPE/ONT) ಮತ್ತು ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಯಾವುದೇ ಇನ್‌ ಸ್ಟಾಲೇಷನ್ ಶುಲ್ಕ ಇರುವುದಿಲ್ಲ. ಗ್ರಾಹಕರು ಕೇವಲ ಮಾಸಿಕ ಚಂದಾದಾರಿಕೆ ಪಾವತಿಸಬೇಕಿರುತ್ತದೆ.

ಗ್ರಾಮೀಣ ಗ್ರಾಹಕರಿಗಾಗಿ ಕೇವಲ ರೂ. 259/- ರ ಮಾಸಿಕ ಪ್ಲಾನ್ ಪರಿಚಯಿಸಲಾಗಿದ್ದು, ಇದರಲ್ಲಿ 25 Mbps ವೇಗದ 700 GB ಡೇಟಾ, ಅನಿಯಮಿತ ಕರೆಗಳು ಹಾಗೂ ಪ್ರಸಾರ ಭಾರತಿ ಟಿವಿ/Waves App/BSNL-Skypro IFTV ಉಚಿತ ಚಾನೆಲ್‌ ಗಳ ಸೌಲಭ್ಯವಿದೆ.

ಗ್ರಾಮೀಣ ಯುವಕರು ಬಿಎಸ್‌ಎನ್‌ಎಲ್ ನೊಂದಿಗೆ ಕೈಜೋಡಿಸಿ ‘ಭಾರತ್‌ನೆಟ್ ಉದ್ಯಮಿ’ (BNU) ಆಗಿ ನೋಂದಾಯಿಸಿಕೊಳ್ಳಬಹುದು ಮತ್ತು ಹಳ್ಳಿಗಳಿಗೆ ಇಂಟರ್ನೆಟ್ ಸೇವೆ ಒದಗಿಸುವ ಮೂಲಕ ಆದಾಯ ಗಳಿಸಬಹುದಾಗಿದೆ.

​ಈ ಉಚಿತ ಇಂಟರ್ನೆಟ್ ಸಂಪರ್ಕ ಪಡೆಯಲು ಅಥವಾ ಉದ್ಯಮಿಯಾಗಿ ನೋಂದಾಯಿಸಿಕೊಳ್ಳಲು ಸಾರ್ವಜನಿಕರು ಹತ್ತಿರದ ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಬಿಎಸ್‌ಎನ್‌ಎಲ್ ಮೈಸೂರು ವ್ಯವಹಾರ ವಲಯದ ಮಹಾ ಪ್ರಬಂಧಕರಾದ ಶ್ರೀ ರಾಜೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular