ಹುಣಸೂರು : ಹುಣಸೂರು ರೋಟರಿ ಕ್ಲಬ್ ಮತ್ತು ಹುಣಸೂರು ಅಪೊಲೋ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರದ ರೋಟರಿ ಭವನದಲ್ಲಿ ಶುಕ್ರವಾರ ಬೆಳಗ್ಗೆ 10.30.ಕ್ಕೆ ಕ್ಯಾನ್ಸರ್ ವಿಶ್ವ ದಿನದ ಅಂಗವಾಗಿ ಅಪೊಲೋ ಆಸ್ಪತ್ರೆಯ ಪ್ರಖ್ಯಾತ ಸ್ತ್ರೀ ರೋಗ ತಜ್ಞೆ ಹಾಗೂ ಪ್ರಸೂತಿ ವೈದ್ಯೆ ಡಾ.ಕವಿತಾ ಬಿ. ಅವರು ಉಚಿತ ತಪಾಸಣೆ ಮತ್ತು ಕ್ಯಾನ್ಸರ್ ಅರಿವಿನ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ಆದ್ದರಿಂದ ಈ ಭಾಗದ ಜನತೆ ಈ ಸದುಪಯೋಗವನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿ ಮನವಿ ಮಾಡಿದ್ದು ಅವರೊಂದಿಗೆ ಅಪೊಲೋ ಆಸ್ಪತ್ರೆಯ ಡಾ.ಪಲ್ಲವಿ ಕೂಡ ಭಾಗವಹಿಸಿ ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.



