Monday, November 3, 2025
Google search engine

Homeಆರೋಗ್ಯಹೆಚ್.ಡಿ. ಕೋಟೆ ತಾಲ್ಲೂಕಿನಲ್ಲಿ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮೌಲ್ಯಾಂಕನ ಶಿಬಿರ

ಹೆಚ್.ಡಿ. ಕೋಟೆ ತಾಲ್ಲೂಕಿನಲ್ಲಿ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮೌಲ್ಯಾಂಕನ ಶಿಬಿರ

ವರದಿ: ಎಡತೊರೆ ಮಹೇಶ್

ಹೆಚ್.ಡಿ. ಕೋಟೆ : ಹೆಚ್.ಡಿ.ಕೋಟೆ ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ ಡಿ.ಕೋಟೆ ಇವರ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್. ಡಿ.ಕೋಟೆ ಇವರ ಸಹಯೋಗದೊಂದಿಗೆ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮೌಲ್ಯಾಂಕನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಸಮನ್ವಯ ಅಧಿಕಾರಿಗಳಾದ ಶೋಭಾ
ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ ರವಿಕುಮಾರ್. ಟಿ.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜು.BRC ಕೃಷ್ಣ ರವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.

ನಂತರ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಸಮನ್ವಯ ಅಧಿಕಾರಿಯಾದ ಶೋಭಾ ಮಾತನಾಡಿ, ಕಾರ್ಯ ಕ್ರಮವನ್ನು ಮೊಟ್ಟ ಮೊದಲ ಬಾರಿಗೆ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ತಾಲೂಕಿನಲ್ಲೂ ಸಹ ಈ ರೀತಿ ಶಿಬಿರವನ್ನು ಯೋಜನೆ ಮಾಡುತ್ತೇವೆ. ಎಚ್ ಡಿ ತಾಲ್ಲೂಕಿನ ಎಲ್ಲ ವಿಶೇಷ ಚೇತನ ಮಕ್ಕಳು ತಪಾಸಣೆಯನ್ನು ಮಾಡಿಸಿಕೊಂಡು ಅಗತ್ಯ ಇರುವ ಸಲಕರಣೆಗಳನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.

ನಂತರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಒಟ್ಟು 352 ವಿಶೇಷ ಚೇತನ ಮಕ್ಕಳು ಇದ್ದಾರೆ. ಇದರಲ್ಲಿ ಎಲ್ಲರಿಗೂ ಯುಡಿಐಡಿ ಕಾರ್ಡ್ ಸಿಕ್ಕಿರುವುದಿಲ್ಲ. ಆದುದರಿಂದ ಪೋಷಕರು ಹೆಚ್ಚಿನ ಗಮನವಹಿಸಿ ಆರೋಗ್ಯ ಇಲಾಖೆಯ ಜೊತೆಗೂಡಿ ಮಕ್ಕಳಿಗೆ ಯುಡಿಐಡಿ ಕಾರ್ಡನ್ನು ಮಾಡಿಸಬೇಕು. ಜೊತೆಗೆ ಸರ್ಕಾರದಿಂದ ಬರುವಂತಹ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ವಾರದಲ್ಲಿ ಎರಡನೇ ಮಂಗಳವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುಡಿಐಡಿ ಕಾರ್ಡ್ ಮಾಡಿಸಲು ತಪಾಸಣೆಯನ್ನು ಮಾಡಲಾಗುತ್ತದೆ. ಜೊತೆಗೆ ಈ ರೀತಿ ವಿಶೇಷ ಶಿಬಿರವನ್ನು ಸಹ ಆಯೋಜನೆ ಮಾಡುತ್ತೇವೆ. ಮಕ್ಕಳಲ್ಲಿ ಹಲವಾರು ನರಗಳಸಮಸ್ಯೆ ಕಣ್ಣಿನ ದೃಷ್ಟಿ, ದೋಷ ಸಮಸ್ಯೆ, ಅಂಗವಿಕಲತೆ ಸಮಸ್ಯೆಗಳನ್ನು ನೋಡುತ್ತಿದ್ದೇವೆ ಇದು ಯಾರ ದೇವರಶಾಪವಲ್ಲ ಹಾಗೂ ವಂಶ ಪರಂಪರೆಯಿಂದ ಬರುವ ರೋಗ ಅಲ್ಲ, ಹಲವಾರು ಕಾರಣಗಳಿಂದ ಈ ರೀತಿ ಹುಟ್ಟುತ್ತವೆ, ವಿಶೇಷ ಚೇತನರ ಮಕ್ಕಳನ್ನು ಪಾಲನೆ ಮಾಡುವುದು ಅಷ್ಟೊಂದು ಸುಲಭವಲ್ಲ , ಅವರನ್ನು ನೋಡಿಕೊಳ್ಳುತ್ತಿರುವ ತಾಯಿಯವರಿಗೆ ತಾಲೂಕಿನ ಪರವಾಗಿ ಧನ್ಯವಾದ ತಿಳಿಸಿದರು ಹಾಗೂ ಈ ಶಿಬಿರದಲ್ಲಿ ನುರಿತ ತಜ್ಞ ವೈದ್ಯರುಗಳು ಇರುತ್ತಾರೆ ಎಲ್ಲಾ ವಿಶೇಷ ಚೇತನರ ಮಕ್ಕಳು ತಪಾಸಣೆಯನ್ನು ಮಾಡಿಸಿ ಈ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಮಾತನಾಡಿ ನಮ್ಮ ತಾಲೂಕಿನಲ್ಲಿ ಶಿಬಿರವನ್ನು ಆಯೋಜಿಸಿರುವುದು ತುಂಬಾ ಸಂತೋಷಕರವಾದ ವಿಷಯ, ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ನಮಗೆ ಎಲ್ಲಾ ರೀತಿಯಲ್ಲೂ ಸಹಾಯವನ್ನು ಮಾಡುತ್ತಾ ಇದ್ದಾರೆ, ಅವರಿಗೆ ಧನ್ಯವಾದಗಳು ಹಾಗೂ ಈ ಶಿಬಿರವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

ಈ ಕಾರ್ಯ ಕ್ರಮದಲ್ಲಿ ಮಕ್ಕಳ ತಜ್ಞರಾದ ಡಾ. ಶಾಂತ ಕುಮಾರ್, ಕಣ್ಣಿನ ತಜ್ಞರಾದ ಡಾ. ರಾಜಶೇಖರ್, ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳಾದ ಡಾ. ಹೇಮಲತಾ ಡಾ. ರಮ್ಯಾ, ಶಿಕ್ಷಣ ಇಲಾಖೆಯ ಗಿರೀಶ್ ಮೂರ್ತಿ, ಮಹದೇವ್, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗದವರು ವಿಶೇಷ ಚೇತನ ಮಕ್ಕಳು ಪೋಷಕರು ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular