Tuesday, May 20, 2025
Google search engine

Homeರಾಜ್ಯಸುದ್ದಿಜಾಲಫಲಪುಷ್ಪ ಪ್ರದರ್ಶನ: ತೋಟಗಾರಿಕೆ ಇಲಾಖೆಯಿಂದ ಭರದ ಸಿದ್ಧತೆ

ಫಲಪುಷ್ಪ ಪ್ರದರ್ಶನ: ತೋಟಗಾರಿಕೆ ಇಲಾಖೆಯಿಂದ ಭರದ ಸಿದ್ಧತೆ

ಮೈಸೂರು: ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿರುವ ಫಲಪುಷ್ಪ ಪ್ರದರ್ಶನ ಆಯೋಜನೆಗೆ ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘಸಿದ್ಧತೆ ಪ್ರಾರಂಭಿಸಿದ್ದು,
ಕುಪ್ಪಣ್ಣ ಪಾರ್ಕ್‌ನಲ್ಲಿ ಅ.೧೫ರಿಂದ ದಸರಾ ಫಲಪುಷ್ಪ ಪ್ರದರ್ಶನ ಎಲ್ಲರನ್ನು ಆಕರ್ಷಿಸಲಿದೆ. ಈ ಬಾರಿ ವಿಶೇಷವಾಗಿ ಚಂದ್ರಯಾನ-೩, ಏಕದಿನ ಕ್ರಿಕೆಟ್ ವಿಶ್ವಕಪ್‌ನ ಟ್ರೋಫಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಗೋಪುರ ಸೇರಿದಂತೆ ನಾನಾ ಮಾದರಿಯ ಬೃಹತ್ ಹೂವಿನ ಕಲಾಕೃತಿಯನ್ನು ವಿವಿಧ ಸಂಘ, ಸಂಸ್ಥೆ, ಕೈಗಾರಿಕೆಗಳ ಸಹಾಯದಿಂದ ನಿರ್ಮಾಣ ಮಾಡಲು ಚಿಂತಿಸಲಾಗಿದೆ.

ಉದ್ಯಾನ ಗಾಜಿನ ಮನೆಯಲ್ಲಿ ಪ್ರತಿ ಬಾರಿ ಒಂದು ಬೃಹತ್ ಹೂವಿನ ಕಲಾಕೃತಿಯನ್ನು ನಿರ್ಮಾಣ ಮಾಡಲಾಗುತ್ತದೆ. ಈ ಬಾರಿ ಇಸ್ರೋ ವಿಜ್ಞಾನಿಗಳ ಸಾಧನೆಯಾಗಿರುವ ಚಂದ್ರಯಾನ-೩ಕಲಾಕೃತಿಯನ್ನು ಹೂವಿನಿಂದ ನಿರ್ಮಿಸಲು ಇಲಾಖೆ ಮುಂದಾಗಿದೆ. ಆ ಕಲಾಕೃತಿಯು ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿದೆ. ಈ ಮಧ್ಯೆ ಫಲಪುಷ್ಪ ಪ್ರದರ್ಶನದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಟ್ರೋಫಿ ಮಾದರಿಯನ್ನು ನಿರ್ಮಿಸುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಹೆಚ್ಚುವಂತೆ.

ಸೂರ್ಯ ಗ್ರಹಣ ಎಂದರೆ ಏನು ಎಂಬ ವಿಷಯದ ಬಗ್ಗೆಯೂ ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಈ ಬಾರಿ ನಡೆಯಲಿದೆ. ರಾಜ್ಯ ಸರ್ಕಾರ ಸೆ.೧೫ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುವ ಜತೆಗೆ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮಕ್ಕೂ ಚಾಲನೆ ನೀಡಿದೆ. ಅದರ ಅಂಗವಾಗಿ ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಸಂವಿಧಾನ ಪೀಠಿಕೆ ಮಾದರಿಯನ್ನು ನಿರ್ಮಿಸಿ, ಅಲ್ಲಿ ಸಾರ್ವಜನಿಕರಿಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲುಚಿಂತಿಸಲಾಗಿದೆ.

ಈ ಬಾರಿ ೬೦ ಸಾವಿರ ಪಾಟ್‌ಗಳಲ್ಲಿ ವಿವಿಧ ಗಿಡಗಳನ್ನ ಬೆಳೆಸಲಾಗುತ್ತಿದೆ. ನಾನಾ ಮಾದರಿಯ ಬೃಹತ್ ಹೂವಿನ ಕಲಾಕೃತಿವಿವಿಧ ಸಂಘ, ಸಂಸ್ಥೆ, ಕೈಗಾರಿಕೆಗಳ ಸಹಾಯದಿಂದ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದು ಬಿ.ಎನ್.ಸುವೇದಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹೇಳಿದರು.

RELATED ARTICLES
- Advertisment -
Google search engine

Most Popular