ಚಾಮರಾಜನಗರ: ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧು ಶೇಖರ ಭಾರತೀ ಸ್ವಾಮಿಗಳವರು ವಿಜಯ ಯಾತ್ರೆಯ ಮೂಲಕ ಹೆಬ್ಬಸೂರಿಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಚಾಮರಾಜನಗರ ಜನತೆಯ ಪರವಾಗಿ ಜಿಲ್ಲಾ ಬ್ರಾಹ್ಮಣ ಸಂಘದ ನೇತೃತ್ವದಲ್ಲಿ ಮಾರ್ಚ್ ೨೮ರ ಗುರುವಾರ ಸಂಜೆ ೪:೩೦ಕ್ಕೆ ಸಂತೆಮರಹಳ್ಳಿ ವೃತ್ತದ ಸಿಲ್ಕ್ಫಿ ಲೇಚರ್ ಮುಂಭಾಗ ವೇದ ಮಂತ್ರ ಘೋಷ ಹಾಗೂ ಪೂರ್ಣ ಕುಂಭದ ಮೂಲಕ ಸ್ವಾಗತಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಗುರು ಕೃಪೆಗೆ ಪಾತ್ರರಾಗಬೇಕೆಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಜಿಎಂ ಹೆಗಡೆ ,ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಎನ್ ಋಗ್ವೇದಿ, ಖಜಾಂಚಿ ಎಸ್ ಬಾಲಸುಬ್ರಹ್ಮಣ್ಯ ಮನವಿ ಮಾಡಿದ್ದಾರೆ .
ಹೆಬ್ಬಸೂರು: ಮಾರ್ಚ್ ೨೮ರ ಸಂಜೆ ೫:೩೦ಕ್ಕೆ ಹೆಬ್ಬಸೂರು ಗ್ರಾಮಕ್ಕೆ ಆಗಮಿಸುವರು. ಶ್ರೀ ಶ್ರೀಗಳ ರವರನ್ನು ಹಸಿರು ತೋರಣಗಳೊಂದಿಗೆ ಮೆರವಣಿಗೆ , ವೇದ ಘೋಷ , ಪೂರ್ಣಕುಂಭ ಸ್ವಾಗತ , ಹಾಗೂ ಶಾರದಾ ಕೃಪಾ ಕಟ್ಟಡದ ಉದ್ಘಾಟನೆ ಶ್ರೀ ಶ್ರೀ ಚಂದ್ರಮೌಳೇಶ್ವರ ಪೂಜೆ ನಡೆಯಲಿದೆ ಎಂದು ಶೃಂಗೇರಿ ಶಾಖಾ ಮಠದ ಧರ್ಮಾಧಿಕಾರಿ ಶ್ರೀಧರ್ ಪ್ರಸಾದ್ ತಿಳಿಸಿದ್ದಾರೆ