Sunday, May 25, 2025
Google search engine

Homeರಾಜ್ಯಸುದ್ದಿಜಾಲನರೇಗಾ ಯೋಜನೆಯಡಿ ನಾಲಾ ಕಾಮಗಾರಿಗೆ ಜಿ.ಪಂ ಸಿಇಒ ಭೇಟಿ, ಪರಿಶೀಲನೆ

ನರೇಗಾ ಯೋಜನೆಯಡಿ ನಾಲಾ ಕಾಮಗಾರಿಗೆ ಜಿ.ಪಂ ಸಿಇಒ ಭೇಟಿ, ಪರಿಶೀಲನೆ

ಧಾರವಾಡ : ಕೋಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಂಗನಹಳ್ಳಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ ಟಿ. ಕೆ.ಅವರು ಭೇಟಿ ನೀಡಿ ವೀಕ್ಷಿಸಿದ್ದರು.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕೆಲಸದಲ್ಲಿ ಮಹಿಳೆಯರು ಭಾಗವಹಿಸುವಂತೆ ಶಿಂಗನಹಳ್ಳಿ ಗ್ರಾಮದ ಕೂಲಿಕಾರ್ಮಿಕರ ಸಮಸ್ಯೆ ಹಾಗೂ ಸೌಲಭ್ಯಗಳ ಕುರಿತು ಚರ್ಚೆ ನಡೆಸುತ್ತಿರುವುದನ್ನು ವೀಕ್ಷಿಸಿ. ಬಳಿಕ ಶಿಂಗನಹಳ್ಳಿಯಲ್ಲಿರುವ ಸೋದರ ಸಂಬಂಧಿ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಚಂದ್ರು ಪೂಜಾರ, ಪಿಡಿಒ, ತಾಂತ್ರಿಕ ಸಹಾಯಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular