Sunday, May 25, 2025
Google search engine

Homeಅಪರಾಧಗದಗ: ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ

ಗದಗ: ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ

ಗದಗ: ನವವಿವಾಹಿತೆಯೊಬ್ಬರು ಪ್ರಿಯಕರನೊಂದಿಗೆ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಶನಿವಾರ ಬೆಳಗಿನಜಾವ ನಡೆದಿದೆ.

ನರೇಗಲ್ ಪಟ್ಟಣದ ಅಪ್ಪಣ್ಣ ಗೊರಕಿ (28), ಲಲಿತಾ ಹಲಗೇರಿ (21) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೇಮಿಸುತ್ತಿದ್ದ ಪ್ರೇಮಿಗಳು ಮದುವೆಯಾಗುವ ಹಂಬಲದಲ್ಲಿದ್ದರು. ಆದರೆ, ಪೋಷಕರ ಒತ್ತಾಯಕ್ಕೆ ಮಣಿದು ಲಲಿತಾ ಹಲಗೇರಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಗಾಣಾಪುರ ಗ್ರಾಮದ ಯುವಕನೊಂದಿಗೆ ಏ. 4ರಂದು ವಿವಾಹವಾಗಿತ್ತು. ಇದರಿಂದ ಪ್ರೇಮಿಗಳು ಸಾಕಷ್ಟು ಮನನೊಂದಿದ್ದರು ಎನ್ನಲಾಗಿದೆ.

ಏ. 12ರಂದು ತವರು ಮನೆಗೆ ಬಂದಿದ್ದ ಲಲಿತಾ ಹಲಗೇರಿ ಶನಿವಾರ ಬೆಳಗಿನ ಜಾವ ತನ್ನ ಪ್ರೇಮಿ ಅಪ್ಪಣ್ಣ ಗೊರಕಿ ಅವನೊಂದಿಗೆ ನರೇಗಲ್ ಪಟ್ಟಣದ ಹೊರ ವಲಯದ ಗಜೆಂದ್ರಗಡ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

RELATED ARTICLES
- Advertisment -
Google search engine

Most Popular