ಮಂಡ್ಯ: ಇಂದು 155ನೇ ಗಾಂಧಿ ಜಯಂತಿ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮಂಡ್ಯದ ಕಾಂಗ್ರೆಸ್ ಕಚೇರಿಯಿಂದ ಗಾಂಧಿ ಪ್ರತಿಮೆವರೆಗೆ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.

ನೂರಾರು ಕೈ ಕಾರ್ಯಕರ್ತರೊಂದಿಗೆ ಜಾಥಾ ನಡೆಸಿ ಗಾಂಧೀಜಿ ಸ್ಮರಣೆ ಮಾಡಿದರು. ಜಾಥಾ ವೇಳೆ ಗಾಂಧಿ ಟೋಪಿ ಧರಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಕಾರ್ಯಕರ್ತರಿಂದ ಜೈಕಾರ ಕೂಗಲಾಯಿತು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಮಾಡಲಾಗಿತ್ತು. ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಳಿಕ ಕಾರ್ಯಕರ್ತರ ಜೊತೆ ಸಚಿವ ಎನ್.ಚಲುವರಾಯಸ್ವಾಮಿ ಹೆಜ್ಜೆ ಹಾಕಿ ಗಾಂಧಿ ನಡೆಗೆ ಸಾಥ್ ನೀಡಿದರು. ಸಚಿವ ಚೆಲುವರಾಯಸ್ವಾಮಿಗೆ ಶಾಸಕ ಗಣಿಗ ರವಿಕುಮಾರ್, ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್ ಸೇರಿ ಹಲವರು ಸಾಥ್ ನೀಡಿದರು.