ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ತಾಲೂಕಿನ ಕೆ.ಎಡತೊರೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ ಸ್ಥಾನಕ್ಕೆ ಗಣೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಗೌಡ ಆಯ್ಕೆಯಾಗಿದ್ದಾರೆ.
13 ಜನರ ಆಡಳಿತ ಮಂಡಳಿಗೆ ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿ ಪಡಿಸಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗಣೇಶ್, ಮಲ್ಲೇಗೌಡ ಹೊರತುಪಡಿಸಿ ಯಾರೂ ನಾಮ ಪತ್ರ ಸಲ್ಲಿಸದ ಕಾರಣ ಈ ಒಬ್ಬರನ್ನು ಅವಿರೊಧ ಆಯ್ಕೆಯೆಂದು ಅಧಿಕೃತವಾಗಿ ಚುನಾವಣಾಧಿಕಾರಿ ಫಿಲೋಮಿನಾ ಘೋಷಿಸಿದರು.

ಆಯ್ಕೆ ಪ್ರಕ್ರಿಯೆ ನಂತರ ಬೆಂಬಲಿಗರು ಡೇರಿ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ಮಲ್ಲೇಗೌಡ ಮಾತನಾಡಿ, ನಮ್ಮ ಗ್ರಾಮದಲ್ಲಿ ಹೈನುಗಾರಿಕೆಯಿಂದ ಜೀವನ ನಡೆಸುವ ರೈತರಿಗೆ ಹೆಚ್ಚಿನ ರೀತಿಯಲ್ಲಿ ನೆರವು ನೀಡಲಾಗುವುದು. ಸಹಕಾರ ಸಂಘದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸದಸ್ಯರಿಗೆ ಶೀಘ್ರ ದೊರೆಯುವಂತೆ ಮಾಡಲಾಗುವುದು. ನಮ್ಮ ಸಹಕಾರ ಸಂಘವು ಮೈಸೂರು ಜಿಲ್ಲೆಯಲ್ಲಿ ಉತ್ತಮ ಹೆಸರುಗಳಿಸುವಂತೆ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ಎಚ್.ಎಲ್.ಸುಭಾಷ್ ಚಂದ್ರ, ನಂದೀಶ್, ವೈ.ಎನ್.ಕುಮಾರ್, ಸುಭಾಷ್ ಚಂದ್ರ, ಹೆಚ್.ಟಿ.ಮಹೇಶ್, ನರಸಿಂಹಮೂರ್ತಿ, ರಮೇಶ ಚಿಕ್ಕೇಗೌಡ, ದ್ರಾಕ್ಷಾಯಿಣಿ, ಶಂಭುಲಿಂಗಮ್ಮ, ಮುನೀರ್ ಸಾಬ್, ಶಿವಕುಮಾರ್, ಗಂಗಾಧರ್, ಗೋವಿಂದ್ ರಾಜ್, ಮಂಜುನಾಥ್, ಸೋಮೇಶ್, ಡಿ.ನಾಗರಾಜು, ಚೆಲುವರಾಜು, ಸಿಂಗಯ್ಯ, ವೆಂಕಟೇಶ್, ಕುಮಾರ್, ನಾಗರಾಜ್ ರಿಜ್ವಾನ್, ಮಹೇಂದ್ರ , ದೇವನಾಥ, ವೈ.ಡಿ ಹರೀಶ್, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ವಿವೇಕ್ ಸೇರಿದಂತೆ ಮತ್ತಿತರರಿದ್ದಾರೆ.