Monday, May 26, 2025
Google search engine

Homeರಾಜ್ಯಸುದ್ದಿಜಾಲಗಣೇಶ್ ಆರ್. ಕೆಂಚನಾಲ್‍ರವರಿಗೆ ಡಿ.ಲಿಟ್ ಪದವಿ ಘೋಷಣೆ

ಗಣೇಶ್ ಆರ್. ಕೆಂಚನಾಲ್‍ರವರಿಗೆ ಡಿ.ಲಿಟ್ ಪದವಿ ಘೋಷಣೆ

ಶಿವಮೊಗ್ಗ: ಆಕಾಶವಾಣಿ ಆರ್.ಜೆ. ಹಾಗೂ ಕನ್ನಡ ಉಪನ್ಯಾಸಕ, ಶ್ರೀ ಗಣೇಶ್ ಆರ್ ಕೆಂಚನಾಲ್ ಇವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ, “ಕನ್ನಡ ನಾಟಕಗಳಲ್ಲಿ ಶರಣರ ಪ್ರ್ರತಿನಿಧೀಕರಣದ ಭಿನ್ನ ಆಯಾಮಗಳು” ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನ ಮಹಾಪ್ರಬಂಧಕ್ಕೆ ಡಿ.ಲಿಟ್ (ಡಾಕ್ಟರ್ ಆಫ್ ಲಿಟರೇಚರ್.) ಪದವಿ ನೀಡಿ, ಘೋಷಣೆ ಮಾಡಿದೆ. ಸಾಣೆಹಳ್ಳಿಯ ಶಿವಸಂಚಾರ, ಚಿತ್ರದುರ್ಗದ ಜಮುರಾ, ಶಿವಮೊಗ್ಗ ಬೆಕ್ಕಿನ ಕಲ್ಮಠದ “ಅಲ್ಲಮರಂಗ”ದಡಿ ಪ್ರದರ್ಶನಗೊಂಡ ಶರಣರ ನಾಟಕಗಳು ಹಾಗೂ ಆಧುನಿಕ ಕವಿಗಳ ಕೆಲ ಶರಣರ ನಾಟಕಗಳನ್ನು ಸಂಶೋಧನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.

RELATED ARTICLES
- Advertisment -
Google search engine

Most Popular