Friday, May 23, 2025
Google search engine

Homeರಾಜ್ಯರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ: ಗೆಜ್ಜಲಗೆರೆ ಗ್ರಾಪಂ ವಿರುದ್ಧ ಸಾರ್ವಜನಿಕರ ಆಕ್ರೋಶ- ಸ್ವಚ್ಛತೆ ಕಾಪಾಡಲು ಮನವಿ

ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ: ಗೆಜ್ಜಲಗೆರೆ ಗ್ರಾಪಂ ವಿರುದ್ಧ ಸಾರ್ವಜನಿಕರ ಆಕ್ರೋಶ- ಸ್ವಚ್ಛತೆ ಕಾಪಾಡಲು ಮನವಿ

ಮದ್ದೂರು: ಇಂದು ವಿಶ್ವದಾದ್ಯಂತ ಪರಿಸರ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದು, ಗಿಡ ನೆಡುವುದು ಹಾಗೂ ಸ್ವಚ್ಛತೆಯನ್ನ ಮಾಡುವ ಮೂಲಕ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ಪಂಚಾಯಿತಿಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ರೂಢಿ.

ಆದರೆ ಮದ್ದೂರು ತಾಲೂಕು ಚಾಮುನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಇದಕ್ಕೆ ವಿಭಿನ್ನವಾಗಿದೆ.

ಗೆಜ್ಜಲಗೆರೆ ಕುದುರೆಗುಂಡಿ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಟೀ ಅಂಗಡಿಯ ಕಪ್ ಗಳು, ವೈದ್ಯರು ಬಳಸಿ ಬಿಸಾಡಿದ ಸಿರೆಂಜ್ ಗಳು ಮೆಡಿಕಲ್ ಸ್ಟೋರ್ ನ ಇತರ ತ್ಯಾಜ್ಯಗಳು ಮದ್ಯದ ಬಾಟಲಿಗಳು ರಸ್ತೆ ಬದಿಯಲ್ಲೇ ಸಂಚರಿಸುವ ನೂರಾರು ಸಾರ್ವಜನಿಕರಿಗೆ ದರ್ಶನ ನೀಡುತ್ತದೆ.

ಹಾಗೂ ಪ್ರತಿದಿನ ಇಲ್ಲಿ ಸಂಚರಿಸುವ ವಾಹನ ಸಾವರರಿಗೆ ಹಾಗೂ ಸಾರ್ವಜನಿಕರಿಗೆ ಗಬ್ಬು ನಾರುವ ವಾಸನೆಯನ್ನೇ ಸೇವಿಸಿ ತರಳಬೇಕಾದ ಸ್ಥಿತಿ  ಒದಗಿ ಬಂದಿದೆ.

ಇನ್ನಾದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಇದ್ದ ಗಮನಹರಿಸಿ ತ್ಯಾಜ್ಯ ವಿಲೇವಾರಿ ಮಾಡುವುದರೊಂದಿಗೆ ಪರಿಸರ ಸ್ವಚ್ಛತೆಯನ್ನು ಕಾಪಾಡಬೇಕೆಂದು ಸಾರ್ವಜನಿಕರು ಆಗಮಿಸಿದ್ದಾರೆ.

RELATED ARTICLES
- Advertisment -
Google search engine

Most Popular