Tuesday, January 13, 2026
Google search engine

Homeರಾಜ್ಯಸುದ್ದಿಜಾಲಮಂಡ್ಯ ಆಲೆಮನೆಯಲ್ಲಿ ಬೆಲ್ಲದ ಅಚ್ಚಿನಿಂದ ತಯಾರಾದ ಗೌರಿ-ಗಣೇಶ

ಮಂಡ್ಯ ಆಲೆಮನೆಯಲ್ಲಿ ಬೆಲ್ಲದ ಅಚ್ಚಿನಿಂದ ತಯಾರಾದ ಗೌರಿ-ಗಣೇಶ

ಮಂಡ್ಯ: ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲು ಮಂಡ್ಯ ತಾಲ್ಲೂಕಿನ ಹಳುವಾಡಿ ಗ್ರಾಮದ ಆಲೆಮನೆಯಲ್ಲಿ ಬೆಲ್ಲದ ಅಚ್ಚಿನಿಂದ ತಯಾರಾದ ಗೌರಿ-ಗಣೇಶನ ಮೂರ್ತಿಗಳು ಕಂಗೋಳಿಸಿದೆ.

ರಾಸಾಯನಿಕ ಮುಕ್ತ ಮಂಡ್ಯ ಬೆಲ್ಲದಲ್ಲಿ ತಯಾರಾದ ಗೌರಿ-ಗಣೇಶ ಮೂರ್ತಿಗಳಿಗೆ ಅಪಾರ ಬೇಡಿಕೆ ಇದ್ದು, ಗೌರಿ-ಗಣೇಶ ಮೂರ್ತಿಗಳಿಗೆ ೫೦೦ ರಿಂದ ೨,೦೦೦ ವರೆಗೆ ಬೆಲೆ ನಿಗದಿಮಾಡಿದ್ದಾರೆ. ಬೆಲ್ಲದ ಗಣೇಶ ತಯಾರಿಸಿ ಮಂಡ್ಯ ಬೆಲ್ಲಕ್ಕೆ ಮತ್ತೊಂದು ಬ್ರ್ಯಾಂಡ್ ರೂಪ ಕೊಟ್ಟು ವಿಕನಸ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹೇಶ್‌ಚಂದ್ರ ಗುರು ನೇತೃತ್ವದಲ್ಲಿ ಬೆಲ್ಲದಿಂದ ಗಣೇಶ ಮೂರ್ತಿ ತಯಾರಿಸಲು ಪ್ರೇರಣೆಯಾಗಿದೆ. ಬೆಲ್ಲದ ಗಣೇಶ ವಿಸರ್ಜನೆ ಮಾಡದೆ ಪ್ರಸಾದವಾಗಿ ಸೇವಿಸಿಬಹುದು.

ಕೆರೆ-ಕಟ್ಟೆಯಲ್ಲಿ ವಿಸರ್ಜನೆ ಮಾಡಿದರೆ ಜೀವಿಗಳಿಗೆ ಅನುಕೂಲ, ಬೆಲ್ಲ ಎಂದೊಡನೆ ಇರುವೆಗಳು ಸಾಮಾನ್ಯ ಇರುವೆಗಳು ಮೂರ್ತಿಯ ಹತ್ತಿರ ಸುಳಿಯದಂತೆ ಬೆಲ್ಲದ ಪಾಕಕ್ಕೆ ಅರಿಸಿನ ಪುಡಿ ಬೆರೆಸಿ ಮೂರ್ತಿ ತಯಾರಿಸಲಾಗಿದೆ. ಪರಿಸರ ಸ್ನೇಹಿ ಬೆಲ್ಲದ ಗಣೇಶ ಮಾರಾಟಕ್ಕೆ ಜಿಲ್ಲಾಡಳಿತದಿಂದ ಮೆಚ್ಚುಗೆ. ಹೊರ ಜಿಲ್ಲೆಗಳಿಂದಲೂ ಹೆಚ್ಚಾಗಿರುವ ಬೇಡಿಕೆ. ಪೀಳಿಗೆಗೆ ಒಳ್ಳೆಯ ಪರಿಸರ ಬಿಟ್ಟು ಹೋಗುವುದು ನಮ್ಮಜವಾಬ್ದಾರಿ. ಆದ್ದರಿಂದ ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular