ಮಂಗಳೂರು(ದಕ್ಷಿಣ ಕನ್ನಡ): ರಾಜ್ಯದಲ್ಲಿ ಪ್ರತಿ ಮನೆಗೊಂದು ಗೇರು ಗಿಡ ವಿತರಣೆ ಯೋಜನೆಯನ್ನು ಕರ್ನಾಟಕ ಗೇರು ಅಭಿವೃದ್ಧಿ ನಿಗಮದಿಂದ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಡಿ .ಎಸ್.ಗಟ್ಟಿ ತಿಳಿಸಿದ್ದಾರೆ.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಂಗಳೂರು ಕಚೇರಿಯಲ್ಲಿ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂದೆ ಪ್ರತಿಯೊಂದು ಮನೆಯ ಮುಂದೆ ಗೇರು ಗಿಡ ಇತ್ತು. ಆದರೆ ಈಗ ಅದು ಕಡಿಮೆಯಾಗಿದೆ. ನಮ್ಮ ಮಕ್ಕಳು ಗೇರು ಬೀಜವನ್ನು ಪೇಟೆಯಿಂದ ತಂದು ತಿನ್ನುವಂತಾಗಿದೆ. ಗೇರು ಬೀಜ ತಿನ್ನುತ್ತಾರೆ. ಗೇರು ಹಣ್ಣು ತಿನ್ನುವುದಿಲ್ಲ. ಗೇರುಹಣ್ಣಿನಲ್ಲಿ ಕಿತ್ತಲೆ ಹಣ್ಣಿಗಿಂತಲೂ ಐದು ಪಟ್ಟು ಹೆಚ್ಚು ವಿಟಮಿನ್ ಇದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಕಾರಣದಿಂದಾಗಿ ನಾವೇ ಗೇರು ಹಣ್ಣು ಉತ್ಪಾದನೆ ಕಡೆಗೆ ಗಮನ ಹರಿಸಬೇಕಾಗಿದೆ ಎಂದರು.