Monday, November 3, 2025
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿನಿಯರು ಔದ್ಯಮಿಕ ಜಗತ್ತಿಗೆ ಅಗತ್ಯವಾದ ಕೋರ್ಸ್ ಮಾಡಿ, ಜೀವನ ರೂಪಿಸಿಕೊಳ್ಳಿ: ಡಾ. ಪ್ರಭಾಕರ ಕೋರೆ

ವಿದ್ಯಾರ್ಥಿನಿಯರು ಔದ್ಯಮಿಕ ಜಗತ್ತಿಗೆ ಅಗತ್ಯವಾದ ಕೋರ್ಸ್ ಮಾಡಿ, ಜೀವನ ರೂಪಿಸಿಕೊಳ್ಳಿ: ಡಾ. ಪ್ರಭಾಕರ ಕೋರೆ

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ : ವಿದ್ಯಾರ್ಥಿನಿಯರು ಔದ್ಯಮಿಕ ಜಗತ್ತಿಗೆ ಅಗತ್ಯವಾದ ಕೋರ್ಸುಗಳನ್ನು ಅಧ್ಯಯನ ಮಾಡಿ ಜೀವನವನ್ನು ರೂಪಿಸಿಕೊಳ್ಳಬೇಕು. ಇಂದು ವೈದ್ಯಕೀಯ, ತಾಂತ್ರಿಕ ಕ್ಷೇತ್ರದಲ್ಲಿ ಹಲವಾರು ಅಲೈಡ್ ಕೋರ್ಸ್ಗಳು ಇವೆ. ಇಂತಹ ಕೋರ್ಸ್ ಗಳಿಂದ ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸಬಹುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರು ಕೆ ಎಲ್ ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಹೇಳಿದರು. 

ಅವರು ಸುಭಾಸ್ ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ನೂತನವಾಗಿ ನಿರ್ಮಾಣ ಮಾಡಿರುವ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯಕ್ಕೇ 60ಕ್ಕೂ ಹೆಚ್ಚು ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡುವುದರೊಂದಿಗೆ ಕರೆ ನೀಡಿದರು. 

ಬೆಳಗಾವಿಯ ನಗರದಲ್ಲಿ ವಿದ್ಯಾರ್ಜನೆಗಾಗಿ ಆಗಮಿಸುವ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯವನ್ನು ನಿರ್ಮಾಣ ಮಾಡಿಕೊಡಬೇಕೆಂಬುದು ಬಹುದಿನಗಳ ಕನಸಾಗಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ, ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪ ಅವರ ಸಹಾಯ ಸಹಕಾರದಿಂದ ಸುಭಾಷ್ ನಗರದಲ್ಲಿ ಸ್ಥಳವನ್ನು ಪಡೆದು ಅನೇಕ ದಾನಿಗಳ ಸಹಾಯದಿಂದ ಸುಸಜ್ಜಿತ ಹಾಗೂ ಬೃಹತ್ ವಸತಿ ನಿಲಯವನ್ನು ಸಿದ್ಧಪಡಿಸಿ ಇಂದು ಬಡವಿದ್ಯಾರ್ಥಿನಿಯರಿಗೆ ಹಸ್ತಾಂತರಿಸುತ್ತಿರುವುದು ಸಂತೋಷವೆನಿಸಿದೆ. ಬಡತನ ಎಲ್ಲರಿಗೂ ಇರುತ್ತದೆ ಅದನ್ನ ಮೆಟ್ಟಿ ನಿಲ್ಲುವುದು ನಮ್ಮ ಬದುಗಿನ ಗುರಿಯಾಗಬೇಕು. ವಿದ್ಯಾರ್ಥಿನಿಯರು ಯಾವ ಕಾರಣಕ್ಕೂ ಧೃತಿಗೆಡದೆ ಉತ್ತಮವಾದ ಕೋರ್ಸುಗಳನ್ನು ಮಾಡಿ ಯಶಸ್ವಿಯಾಗಿ ವಿದ್ಯಾಭ್ಯಾಸವನ್ನು ಪೂರೈಸಿ ಸ್ವಾವಲಂಬಿ ಜೀವನ ನಡೆಸಿದ್ದೆ ಆದರೆ ನಮ್ಮ ಉದ್ದೇಶ ಸಫಲವಾಗುವುದು. ಬಸವಣ್ಣವರ ತತ್ವ ಸಿದ್ಧಾಂತಗಳನ್ನ ಮನನ ಮಾಡಿಕೊಂಡು ಜೀವನವನ್ನು ರೂಪಿಸಿಕೊಳ್ಳುವುದು ನಿಮ್ಮೆಲ್ಲರ ಧ್ಯೇಯ ವಾಗಬೇಕೆಂದು ಡಾ. ಕೋರೆಯವರು ಹೇಳಿದರು. 

RELATED ARTICLES
- Advertisment -
Google search engine

Most Popular