ವರದಿ : ಎಡತೊರೆ ಮಹೇಶ್
ಎಚ್ ಡಿ ಕೋಟೆ: ದಿನಾಂಕ 14.01.2026 ರಂದು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ಹೆಚ್ ಡಿ ಕೋಟೆ ತಾಲ್ಲೂಕು ಜಿನ್ನಹಳ್ಳಿ ಗ್ರಾಮದ ಜೆ ಪಿ ಮಾರಳೂರ ನಾಯಕ ಬಿನ್ ಚೆನ್ನನಾಯಕ ರವರು ಹಂಪಾಪುರ ಉಪ ಪೊಲೀಸ್ ಠಾಣೆಯ ಸಮೀಪ ಬೇಕರಿ ಹತ್ತಿರ ನಡೆದು ಕೊಂಡು ಬರುತ್ತಿರುವಾಗ ಒಂದು ಚಿನ್ನದ ಕತ್ತಿನ ಸರ ಸಿಕ್ಕಿರುತ್ತೆ ಎಂದು ಹೆ ಚ್ ಡಿ ಕೋಟೆ ಪೊಲೀಸ್ ಠಾಣೆ ಗೆ ತಂದು ಕೊಟ್ಟಿರುತ್ತಾರೆ. ಅದರಿಂದ ಚಿನ್ನದ ಸರವನ್ನು ಕಳೆದುಕೊಂಡ ಸಂಬಂಧಪಟ್ಟ ವಾರಸುದಾರರು ಹೆ ಚ್. ಡಿ ಕೋಟೆ ಪೊಲೀಸ್ ಠಾಣೆಗೆ ಸಂಪರ್ಕಿಸಲು ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ರವರನ್ನು ಭೇಟಿ ಮಾಡಬಹುದು ಅಥವಾ ಪೊಲೀಸ್ ಠಾಣೆ 08228 255329 ಅಥವಾ 948080 5063 ಈ ಕರೆ ಮಾಡಬಹುದು, ಸರ ಕಳೆದುಕೊಂಡ ವಾರಸುದಾರರು ಸೂಕ್ತ ದಾಖಲೆಯೊಂದಿಗೆ ಠಾಣೆಗೆ ಬರುವಂತೆ ಕರೆ ನೀಡಲಾಗಿದೆ ಎಂದು ಪೊಲೀಸ್ ಠಾಣೆಯ ಗವಿ ಗೌಡ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



