ಬೆಂಗಳೂರು: ಕರ್ನಾಟಕದ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ನಾಳೆ ಅಥವಾ ನಾಡಿದ್ದು (ಏ.23, 24) ಬರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೊಂದು ಮೂಲಗಳ ಪ್ರಕಾರ ಮೇ ತಿಂಗಳ ಆರಂಭದಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂಕಪಟ್ಟಿಯನ್ನು ಪಡೆಯಬಹುದು ಎಂದು ಹೇಳಲಾಗಿದೆ.
ಕಳೆದ ಎರಡು ವರ್ಷಗಳ (2024 ಮತ್ತು 2025) ಅಂಕಿಅಂಶಗಳನ್ನು ಗಮನಿಸಿದರೆ, ಕಳೆದ ವರ್ಷ ಮೇ 9ರ ಸುಮಾರಿಗೆ ಫಲಿತಾಂಶ ಪ್ರಕಟವಾಗಿತ್ತು. ಈ ವರ್ಷವೂ ಮಂಡಳಿಯು ಅದೇ ಸಮಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಫಲಿತಾಂಶ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಹಿಂದೆ ಏಪ್ರಿಲ್ 23 ಅಥವಾ 24ಕ್ಕೆ ಫಲಿತಾಂಶ ಪ್ರಕಟ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಬಂದಿಲ್ಲ ಹಾಗೂ ಇಲಾಖೆ ಕೂಡ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.
ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ಲಿಂಕ್‌ಗಳ ಮೂಲಕ ಫಲಿತಾಂಶ ಚೆಕ್ ಮಾಡಬಹುದು:
karresults.nic.in ಮತ್ತು kseab.karnataka.gov.in
ಎಸ್‌ಎಸ್‌ಎಲ್‌ಸಿ ಫಲಿತಾಂಶದ ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಹಂತ 1: ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ ಕಾಣುವ ‘SSLC Result 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕವನ್ನು (Date of Birth) ನಮೂದಿಸಿ.
ಹಂತ 4: ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 5: ನಿಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಅಧಿಕೃತ ವೆಬ್‌ಸೈಟ್ ಮಾತ್ರವಲ್ಲದೆ, ವಿದ್ಯಾರ್ಥಿಗಳು DigiLocker ಮೂಲಕವೂ ತಮ್ಮ ಅಂಕಪಟ್ಟಿಯನ್ನು ಪಡೆಯಬಹುದು. ಅಲ್ಲದೆ, ಗೂಗಲ್ ಪ್ಲೇ ಸ್ಟೋರ್‌ನಿಂದ KarnatakaOne ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳುವ ಮೂಲಕವೂ ಫಲಿತಾಂಶ ವೀಕ್ಷಿಸಬಹುದು.
ಈ ಶೈಕ್ಷಣಿಕ ವರ್ಷದಿಂದ KSEAB ಮಹತ್ವದ ಬದಲಾವಣೆ ಮಾಡುವ ಯೋಜನೆಯಲ್ಲಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಯಲ್ಲಿ ಶ್ರೇಣಿಗಳ ಬದಲು ಅಂಕಗಳನ್ನು ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಈ ವಿಚಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ಇತ್ಯರ್ಥ ಮಾಡಿದ ಕೋರ್ಟ್ 2025-26ರಿಂದ ಹಿಂದಿ ವಿಷಯಕ್ಕೆ ಅಂಕ ನೀಡಬೇಕೆಂದು ಪೀಠ ಸ್ಪಷ್ಟಪಡಿಸಿದ್ದು, ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸುವ ಮುನ್ನ ಪರೀಕ್ಷಾ ಪದ್ಧತಿ ಬದಲಾವಣೆ ಸೂಕ್ತವಲ್ಲ ಎಂದು ತಿಳಿಸಿದೆ.
ಹೈಕೋರ್ಟ್ ಆದೇಶ ಬಂದ ಕೂಡಲೆ ಈ ಬಾರಿಯ ಫಲಿತಾಂಶ ವಿಳಂಬವಾಗಬಹುದು ಎಂದು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ, ಫಲಿತಾಂಶ ಪ್ರಕಟಣೆಗೆ ಯಾವುದೇ ಅಡ್ಡಿಯಿಲ್ಲ, ನಿಗದಿತ ಸಮಯಕ್ಕೇ ರಿಸಲ್ಟ್ ಬರಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.



