ಮಂಡ್ಯ: ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್ ಎಸ್ ಜಲಾಶಯದ 1,153 ಕ್ಯೂಸೆಕ್ ಗೆ ಒಳ ಹರಿವಿನ ಪ್ರಮಾಣ ಹೆಚ್ಚಿದೆ.
ತೀವ್ರ ಬರಗಾಲ, ಬಿರು ಬೇಸಿಗೆ ಹಿನ್ನೆಲೆ ಸಂಪೂರ್ಣ ಒಳ ಹರಿವು ಸ್ತಬ್ಧವಾಗಿತ್ತು. ದಿನೇ ದಿನೇ ಅಣೆಕಟ್ಟೆಯ ನೀರಿನ ಮಟ್ಟ ಕುಸಿತದಿಂದ ಕುಡಿಯುವ ನೀರಿಗೂ ಹಾಹಾಕಾರ ಎದ್ದಿತ್ತು. ರೈತರ ಬೆಳೆಗಿರಲಿ, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಕಳೆದೊಂದು ವಾರದಿಂದ ಉತ್ತಮ ಮಳೆ ಹಿನ್ನೆಲೆ ಅಣೆಕಟ್ಟೆಯ ಒಳ ಹರಿವಿನ ಪ್ರಮಾಣ ಅಲ್ಪ ಏರಿಕೆಯಾಗಿದೆ.
KRS ಅಚ್ಚುಕಟ್ಟು ವ್ಯಾಪ್ತಿಯ ರೈತರು, ಜನರಲ್ಲಿ ಸಂತಸ ಮನೆ ಮಾಡಿದೆ.
KRS ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದಿನ ಮಟ್ಟ 80.40 ಅಡಿ ಇದೆ. ಒಳ ಹರಿವು 1,153 ಕ್ಯೂಸೆಕ್ ಇದ್ದು, ಹೊರ ಹರಿವು 267 ಕ್ಯೂಸೆಕ್ ಇದೆ.