- ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ
ಪಿರಿಯಾಪಟ್ಟಣ:ತಾಲೂಕಿನ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಶ್ರಮಿಸುತ್ತಿದೆ ಎಂದು ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕೆ.ಹಲದಪ್ಪ ತಿಳಿಸಿದರು.
ಪಟ್ಟಣದ ಶ್ರೀ ಕನ್ನಂಬಾಡಿ ಅಮ್ಮನವರ ಸಮುದಾಯ ಭವನದಲ್ಲಿ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಭಾರತ ಸ್ವಾತಂತ್ರ್ಯ ಪಡೆದ 1947 ರಲ್ಲಿ ಪ್ರಾರಂಭವಾದ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇಂದಿಗೆ 78 ವರ್ಷಗಳನ್ನು ಪೂರೈಸಿದ ಹೆಗ್ಗಳಿಕೆ ಹೊಂದಿದ್ದು, ಅಲ್ಲಿಂದ ಇಲ್ಲಿಯವರೆಗೂ ತಾಲೂಕಿನ ಬಹಳಷ್ಟು ರೈತ ಕುಟುಂಬಗಳಿಗೆ ವಿವಿಧ ಉದ್ದೇಶಗಳಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ತಾಲೂಕಿನ ರೈತರಿಗೆ ಸಹಾಯ ಮಾಡುತ್ತಿದೆ. ಪ್ರಸ್ತುತ ಈ ಬ್ಯಾಂಕ್ ನಲ್ಲಿ 3191 ‘ಎ’ ವರ್ಗದ ಸದಸ್ಯರು, 1565 ‘ಬಿ’
ವರ್ಗದ ಸದಸ್ಯರು ಹಾಗೂ ಒಬ್ಬರು ಸಿ’ ವರ್ಗದ ಸದಸ್ಯರು ಇದ್ದಾರೆ ಇವರಿಂದ 2024-25ನೇ ಸಾಲಿನಲ್ಲಿ 13580792 ಷೇರುಗಳು ಪಾವತಿಯಾಗಿದೆ ಎಂದರು.
ಸಭೆಯಲ್ಲಿ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ 2024-25ನೇ ಸಾಲಿನ ಆಡಳಿತ ವರದಿ ಮಂಡಿಸಿ, ಲೆಕ್ಕ ಪರಿಶೋಧನೆಯಾದ ಜಮಾ-ಖರ್ಚು, ಲಾಭ-ನಷ್ಟ ಸಭೆಯಲ್ಲಿ ಮಂಡಿಸಿ, ಬಜೆಟ್‌ಗಿಂತ ಹೆಚ್ಚಿಗೆ ಆಗಿರುವ ಹಣವನ್ನು ಮಂಜೂರು ಮಾಡುವ ವಿಚಾರವಾಗಿ ಚರ್ಚೆ ನಡೆಸಿ, 2025-26ನೇ ಸಾಲಿನ ಆಯ-ವ್ಯಯದ ಮಂಜೂರಾತಿ ನೀಡುವ ಬಗ್ಗೆ ಬ್ಯಾಂಕಿನ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿಕೊಳ್ಳುವ ವಿಚಾರದ ಬಗ್ಗೆ ಸಮಾಲೋಚಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಮಮತಾ, ನಿರ್ದೇಶಕರಾದ ನೀಲಮ್ಮ, ಹೆಚ್.ಜಿ.ಪರಮೇಶ್, ಹೆಚ್.ಎಂ.ಪರಮೇಶ್, ಎನ್.ಎಸ್.ಪ್ರಮೀಳಾ, ಪ್ರತೀಕ, ಕೆ.ಪಿ.ಮಂಜುನಾಥ್, ಭೂತನಹಳ್ಳಿ ರವಿ, ಎ.ರಾಜಣ್ಣ, ಟಿ.ಜಿ.ರೋಹಿಣಿ, ಶಿವಣ್ಣ, ಸುರೇಶ್ ಸರ್ಕಾರದ ನಾಮ ನಿರ್ದೇಶಿತ ಸದಸ್ಯ ತೆಲುಗಿನ ಕುಪ್ಪೆ ನಾಗಣ್ಣ ಬ್ಯಾಂಕ್ ಸಿಬ್ಬಂದಿಗಳಾದ ರಾಮಚಂದ್ರ ಮೂರ್ತಿ, ಆರ್.ಪಿ.ಪ್ರಣೀತಾ, ಗಗನ್, ಎಸ್.ಬಿ.ಸತೀಶ್ ಸೇರಿದಂತೆ ಸಾವಿರಾರು ರೈತರು ಉಪಸ್ಥಿತರಿದ್ದರು.