Tuesday, June 16, 2026
Google search engine

Homeರಾಜ್ಯ30 ಸಾವಿರ ವಿದ್ಯಾರ್ಥಿಗಳ ಗೊಂದಲಕ್ಕೆ ಸರ್ಕಾರದ ಸ್ಪಷ್ಟನೆ : ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ:...

30 ಸಾವಿರ ವಿದ್ಯಾರ್ಥಿಗಳ ಗೊಂದಲಕ್ಕೆ ಸರ್ಕಾರದ ಸ್ಪಷ್ಟನೆ : ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ: ಮಧು ಬಂಗಾರಪ್ಪ

ಬೆಂಗಳೂರು :  ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಅತಂತ್ರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರ್ಕಾರಿ ಆಂಗ್ಲ ಮಾಧ್ಯಮಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ರಮಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಮಾಜಿ ಸಚಿವ ಮಧು ಬಂಗಾರಪ್ಪ,  ಅಂಗ್ಲ ಮಾಧ್ಯಮ ಶಾಲೆಗಳನ್ನ ಮೇಲ್ದರ್ಜೆಗೆ ಏರಿಸಲು ಸರ್ಕಾರ ಮುಂದಾಗಿದೆ. 2 ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಅಂಗ್ಲ ಮಾಧ್ಯಮ ಶಾಲೆಗಳು ಇದ್ದರೇ ಅಲ್ಲಿ ದಾಖಲಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ.  ಸರ್ಕಾರಿ ಅಂಗ್ಲ ಮಾಧ್ಯಮ ಶಾಲೆಗಳಲ್ಲೇ ಪ್ರವೇಶಕ್ಕೆ ಸೂಚಿಸಲಾಗಿದೆ.  8ನೇ ತರಗತಿಗೆ  ಪ್ರಾಥಮಿಕ ಅಂಗ್ಲ ಮಾಧ್ಯಮ ಶಾಲೆಗಳನ್ನ ಅಪ್ಡೇಟ್ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಬಡವರು ಮತ್ತು ರೈತರ ಮಕ್ಕಳೂ ಆಂಗ್ಲ ಮಾಧ್ಯಮದಲ್ಲಿ ಕಲಿಯಲಿ ಎಂಬ ಉದ್ದೇಶದಿಂದ 2018-19ನೇ ಸಾಲಿನಲ್ಲಿ 1001 ಕನ್ನಡ ಶಾಲೆಗಳಲ್ಲಿ ಆರಂಭಿಸಿದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಓದಿದ ಸುಮಾರು 30 ಸಾವಿರ ವಿದ್ಯಾರ್ಥಿಗಳು ಮುಂದಿನ ದಾರಿ ತಿಳಿಯದೇ ಅತಂತ್ರರಾಗಿದ್ದಾರೆ ಎಂದು ವರದಿಯಾಗಿತ್ತು. 1 ರಿಂದ 7ನೇ ತರಗತಿಯವರೆಗೆ ಇವರು ಆಂಗ್ಲ ಮಾಧ್ಯಮದಲ್ಲಿ ಓದಿದ್ದಾರೆ. 8ನೇ ತರಗತಿಗೆ ಯಾವ ಶಾಲೆ ಮತ್ತು ಯಾವ ಮಾಧ್ಯಮದಲ್ಲಿ ಓದಬೇಕು ಎನ್ನುವ ಗೊಂದಲ ಅವರಲ್ಲಿ ಉಂಟಾಗಿದ್ದು ಈ ಬಗ್ಗೆ ಸುದ್ದಿಯಾಗಿತ್ತು.

RELATED ARTICLES
- Advertisment -
Google search engine

Most Popular