Sunday, October 12, 2025
Google search engine

Homeರಾಜ್ಯಸುದ್ದಿಜಾಲವಾಲ್ಮೀಕಿ ಜಯಂತಿಗೆ ಸರ್ಕಾರಿ ಮಾನ್ಯತೆ ನೀಡಿದ ಬಿಎಸ್‌ವೈ – ನಾಯಕ ಸಮಾಜಕ್ಕೆ ಬಿಜೆಪಿ ಬದ್ಧ: ಜಿಲ್ಲಾ...

ವಾಲ್ಮೀಕಿ ಜಯಂತಿಗೆ ಸರ್ಕಾರಿ ಮಾನ್ಯತೆ ನೀಡಿದ ಬಿಎಸ್‌ವೈ – ನಾಯಕ ಸಮಾಜಕ್ಕೆ ಬಿಜೆಪಿ ಬದ್ಧ: ಜಿಲ್ಲಾ ಅಧ್ಯಕ್ಷ ಸುಬ್ಬಣ್ಣ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪರಿವಾರವನ್ನು ಎಸ್ ಟಿಗೆ ಸೇರಿಸಿದ್ದು ಮತ್ತು ರಾಜ್ಯದಲ್ಲಿ ಪ್ರಥಮ ಬಾರಿಗೆ ಸರ್ಕಾರದಿಂದ ವಾಲ್ಮೀಕಿ ಜಯಂತಿ ಆಚರಣೆ ಮಾಡಿದ್ದು ಅಂದಿನ ಬಿಜೆಪಿ ಮುಖ್ಯಮಂತ್ರಿ ಗಳಾಗಿದ್ದ ಬಿಎಸ್ ಯಡಿಯೂರಪ್ಪನವರು ಇದನ್ನು ನಾಯಕ ಸಮಾಜದ ಬಂಧುಗಳು ಮರೆಯಬಾರದು ಎಂದು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕಂಬ್ರಹಳ್ಳಿ ಸುಬ್ಬಣ್ಣ ಶನಿವಾರ ತಿಳಿಸಿದರು.

ಸಾಲಿಗ್ರಾಮ ವಾಲ್ಮೀಕಿ ನಾಯಕರ ಸಂಘದಿಂದ ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ನಮ್ಮ ಸಮಾಜಕ್ಕೆ ದೊಡ್ಡ ಹುದ್ದೆ ಕೊಟ್ಟಿದ್ದಾರೆ. ಅದೇ ರೀತಿ ಬಿಜೆಪಿ ಪಕ್ಷ ನಾಯಕ ಸಮಾಜದ ಬೆಂಗಾವಲಿಗೆ ನಿಂತಿದೆ ಹಾಗಾಗಿ ಈ ಭಾಗದಲ್ಲಿ ಬಿಜೆಪಿ ಸಂಘಟನೆ ಮಾಡಲು ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದು ನಿರ್ದೇಶಕರಲ್ಲಿ ಮನವಿ ಮಾಡಿದರು.

ಸಾಲಿಗ್ರಾಮ ನೂತನ ತಾಲೂಕಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಮಾಡಬೇಕಿದೆ ಇದು ಸಮಾಜಕ್ಕೆ ದೊಡ್ಡ ಸವಾಲಾಗಿದೆ. ಸಮಾಜ ಮತ್ತು ಸಂಘ ಹೆದರುವ ಅವಶ್ಯಕತೆ ಇಲ್ಲ ನಿಮ್ಮೊಂದಿಗೆ ಬಿಜೆಪಿಯ ಶಾಸಕರು ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಇರುತ್ತೇವೆ ಸಾಲಿಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ಕಟ್ಟೆ ತೀರೋಣ ಎಲ್ಲರೂ ಒಗ್ಗಟ್ಟಾಗಿರಿ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸಳ್ಳಿ ವೆಂಕಟೇಶ್ ಮಾತನಾಡಿ, ಕೆ ಆರ್ ನಗರ ಪಟ್ಟಣದಲ್ಲಿ ನಿರ್ಮಾಣವಾಗಿರುವ ಮಹರ್ಷಿ ವಾಲ್ಮೀಕಿ ಭವನಕ್ಕೆ ದಿವಂಗತ ಮಾಜಿ ಶಾಸಕ ಚಿಕ್ಕಮಾದು ಅವರ ಮಾರ್ಗದರ್ಶನದಲ್ಲಿ ಮೊದಲ ದಾನಿಗಳಾಗಿ ಒಂದು ಲಕ್ಷ ನೀಡಿದ್ದೆ ವಾಲ್ಮೀಕಿ ಸಮಾಜ ಕೊಟ್ಟ ಮಾತಿಗೆ ತಪ್ಪಲ್ಲ ಎಂಬಂತೆ ಅಲ್ಲಿಂದ ಇಲ್ಲಿಯವರೆಗೂ ನನ್ನ ರಾಜಕೀಯ ಜೀವನದಲ್ಲಿ ನನಗೆ ಬೆಂಗಾವಲಾಗಿ ನಿಂತಿದೆ ನನ್ನ ಉಸಿರಿರುವವರೆಗೂ ಸಮಾಜವನ್ನು ನಾನು ಮರೆಯುವುದಿಲ್ಲ ಅದೇ ರೀತಿ ಸಾಲಿಗ್ರಾಮದಲ್ಲೂ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನಕ್ಕೆ ನನ್ನ ಶಕ್ತಿ ಮೀರಿ ಆರ್ಥಿಕ ನೆರವು ನೀಡುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ಸುಬ್ಬಣ್ಣ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾದ ಮೇಲೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷಕ್ಕೆ ನಾಯಕರ ಸಮಾಜದ ಒಲವು ಹೆಚ್ಚಾಗಿ ಸಿಗುತಿದೆ. ಅದರಂತೆ ನಮ್ಮ ಪಕ್ಷದ ಹೈಕಮಾಂಡ್ ಮುಖಂಡರು ನಾಯಕ ಸಮಾಜದ ಎಲ್ಲಾ ಮುಖಂಡರನ್ನು ಗೌರವಿತವಾಗಿ ಕಾಣುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಹುದ್ದೆಗಳು ನಾಯಕ ಸಮಾಜಕ್ಕೆ ಬಿಜೆಪಿ ಪಕ್ಷದಲ್ಲಿ ಸಿಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬಾಲಕೃಷ್ಣ, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಸಾ ರಾ ತಿಲಕ್, ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಮಹದೇವ್ ಸಿ ಸಿ, ಉಪಾಧ್ಯಕ್ಷ ತಂದ್ರೆ ವೆಂಕಟೇಶನಾಯಕ, ಕಾರ್ಯದರ್ಶಿ ಕಾಳಮ್ಮನ ಕೊಪ್ಪಲು ಲೋಕೇಶ್, ಸಂಘಟನಾ ಕಾರ್ಯದರ್ಶಿ ಶಾಬಾಳು ಬೈರೇಶ್, ನಿರ್ದೇಶಕರಾದ ಸಾಲಿಗ್ರಾಮ ಕೃಷ್ಣನಾಯಕ, ಮಹದೇವನಾಯಕ, ಸಣ್ಣ ನಿಂಗನಾಯಕ, ಹರದನಹಳ್ಳಿ ತಿಮ್ಮನಾಯಕ ಇತರರು ಇದ್ದರು.

RELATED ARTICLES
- Advertisment -
Google search engine

Most Popular