Tuesday, November 25, 2025
Google search engine

Homeರಾಜ್ಯಸುದ್ದಿಜಾಲರೈತರ ಹಿತ ಕಾಯಲು ಸರ್ಕಾರಗಳು ಮುಂದಾಗಬೇಕು: ವಿಧಾನ ಪರಿಷತ್ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು

ರೈತರ ಹಿತ ಕಾಯಲು ಸರ್ಕಾರಗಳು ಮುಂದಾಗಬೇಕು: ವಿಧಾನ ಪರಿಷತ್ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು

ವರದಿ: ವಿನಯ್ ದೊಡ್ಡಕೊಪ್ಪಲು

ಕೆ ಆರ್ ನಗರ: ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ನೀಡಿ ರೈತರ ಹಿತ ಕಾಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಹೇಳಿದರು. ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮದ ಚಿಮುಕು ಭೂಮಿ ಬಳಗ ಮತ್ತು ಮೈಸೂರಿನ ದಾರಿ ಫೌಂಡೇಶನ್ ವತಿಯಿಂದ ನಡೆದ ನೆಲ-ಜಲ-ಭಾಷೆ-ರೈತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ‌ ಅವರು ಮಾತನಾಡಿದರು.

ಎಲ್ಲಾ ಸಮುದಾಯದ ಏಳಿಗಾಗಿ ಜಾರಿಗೆ ತಂದ ಅಧಿಕಾರ ವಿಕೇಂದ್ರಿಕರಣದ ಮೂಲಕ ಗ್ರಾ.ಪಂ.ತಾ.ಪಂ.ಜಿ.ಪಂ.ಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಿ ಜನ ಸಾಮಾನ್ಯರಿಗೆ ಅಧಿಕಾರ ಕೊಟ್ಟು ಗ್ರಾಮಗಳ ಅಭಿವೃದ್ದಿಗೆ ಮುಂದಾಗಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯಗಳು ಎದುರಿಸುತ್ತಿರುವ ನದಿ ನೀರಿನ ಸಮಸ್ಯೆಗಳನ್ನ ಹೋಗಲಾಡಿಸಲು ರಾಷ್ಟ್ರೀಯ ಜಲ ನೀತಿಯನ್ನು ಜಾರಿಗೆ ತಂದು ನೀರು ಜನ ಸೊತ್ತು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದ ಅವರು ಇವತ್ತಿನ ದಿನದಲ್ಲಿ ನೆಲ-ಜಲ ಭಾಷೆಯ ವಿಚಾರವಾಗಿ ಹೋರಾಟ ಮಾಡಬೇಕಾದ ವ್ಯವಸ್ಥೆ ಬಂದಿರುವುದು ನಿಜಕ್ಕು ದುರಂತವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ವಿಷಾದ ವ್ಯಕ್ತಪಡಿಸಿದರು.

ಅತ್ಯುತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ವಿತರಿಸಿ ವಿವಿಧ ಪ್ರಗತಿ ಪರ ರೈತರಿಗೆ ರೈತ ಬಂದು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಬಳಗದ ರೈತ ಬಂಧು ವಿಶೇಷ ಸಂಚಿಕೆಯನ್ನು ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್ ಮತ್ತು ವಿಶ್ರಾಂತ ಪ್ರಾಧ್ಯಾಪಕರ ಪ್ರೊ.ಕೆ.ಸಿ.ಬಸವರಾಜು ಅವರು ಬಿಡುಗಡೆ ಮಾಡಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಚಂದ್ರು ಅವರನ್ನು ರಾಸುಗಳ ಮೆರವಣಿಗೆ ಮೂಲ‌ಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಅಲ್ಲದೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ವಹಿಸಿದ್ದರು.

ನೇತೃತ್ವವನ್ನು ಪ್ರಗತಿಪರ ಚಿಂತಕರು ಅದ ಮೈಸೂರು ಯುವರಾಜ ಕಾಲೇಜಿನ ಪ್ರಾಧ್ಯಾಪಕ ಡಾ.ಸಿ.ಡಿ.ಪರುಶುರಾಮ್ ವಹಿಸಿದ್ದರು.

ಈ ಸಂದರ್ಭದಲ್ಲಿ ದಾರಿ ಫೌಂಡೇಶನ್ ಅಧ್ಯಕ್ಷ ಎಲ್.ರಂಗಯ್ಯ, ಚಿಮುಕ ಬಳಗದ ಸೋಮಪ್ಪ, ಉಪಾಧ್ಯಕ್ಷ ಶಿವಪ್ರಸಾದ್, ಕಾರ್ಯದರ್ಶಿ ಮೋಹನ್, ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ, ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್, ಸದಸ್ಯರಾದ ಸಿ.ಬಿ.ಧರ್ಮ, ಮಹೇಂದ್ರ, ಸಹಕಾರ ಸಂಘದ ಅಧ್ಯಕ್ಷರಾದ ಶಿವಕುಮಾರ್, ದಾಸಯ್ಯ, ಮಾಜಿ ಅಧ್ಯಕ್ಷಾದ ಕೆ.ಆರ್.ಮಂಜುನಾಥ್, ವೆಂಕಟೇಶ್, ನಿರ್ದೇಶಕ ಬಸವಣ್ಣ , ಕೆ.ಆರ್.ನಗರ ಎಎಪಿ ಅಧ್ಯಕ್ಷ ನಾಗರಾಜೇಗೌಡ, ನಿವೃತ್ತ ಉಪನ್ಯಾಸಕ ಕೆ.ಎ.ಜವರೇಗೌಡ, ಮುಖಂಡರಾದ ಡಿ.ರಾಮಕೃಷ್ಣೇಗೌಡ, ವಿಶ್ವೇಶ್ವರಯ್ಯ, ಸುಬ್ಬೇಗೌಡ, ಮಾಸ್ಟರ್ ಹಿರಣ್ಣಯ್ಯ, ಸತ್ಯಪ್ಪ, ಸೋಮಣ್ಣ, ರವಿವಾಸೇಗೌಡ,ನಾಟಿ ವೈದ್ಯ ನಾಗರಾಜೇಗೌಡ, ಕೆ.ಸಿ.ಮಹದೇವ್, ಮಂಜು ಕುಳ್ಳ ರೈತ ಸಂಘದ ಎಂ.ಸಿ.ಗಂಗಾಧರ್, ಲೋಹಿತಾಶ್ವ, ನೀರು ಬಳಕೆದಾರರ ಸಂಘದ ಸದಾಶಿವ ಕೀರ್ತಿ , ಪ್ರಗತಿಪರ ರೈತರಾದ ಬೆಣಗನಹಳ್ಳಿ ಮಂಜು ಬೋರ್, ಹಾಡ್ಯಮಂಜು ಸೇರಿದಂತೆ ಮತ್ತಿರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular